Untitled Document
Sign Up | Login    
Dynamic website and Portals
  
May 28, 2016

ಆರೋಗ್ಯ ವಿಚಾರಿಸಿ ನವಾಜ್ ಷರೀಫ್ ಗೆ ಪ್ರಧಾನಿ ಮೋದಿ ಟ್ವೀಟ್

ಆರೋಗ್ಯ ವಿಚಾರಿಸಿ ನವಾಜ್ ಷರೀಫ್ ಗೆ ಪ್ರಧಾನಿ ಮೋದಿ ಟ್ವೀಟ್

ನವದೆಹಲಿ : ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆ ಪಡೆಯುತ್ತಿರುವ ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಅವರಿಗೆ ಶೀಘ್ರ ಗುಣಮುಖರಾಗುವಂತೆ ಪ್ರಧಾನಿ ನರೇಂದ್ರ ಮೋದಿ ಶುಭ ಹೈರಿಸಿದ್ದಾರೆ.

ಲಂಡನ್​ನಲ್ಲಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ನವಾಜ್ ಷರೀಫ್​ ಅವರಿಗೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ನಿಮಗೆ ದೇವರು ಉತ್ತಮ ಆರೋಗ್ಯ ಕರುಣಿಸಲಿ ಎಂದು ಶುಭ ಹಾರೈಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಷರೀಫ್ ಪುತ್ರಿ ಮರಯಮ್ ನವಾಜ್, ಈಗಾಗಲೇ ತಂದೆ ಚೇತರಿಸಿಕೊಳ್ಳುತ್ತಿದ್ದು, ಮುಂದಿನ ಒಂದು ವಾರ ಕೇಲವು ಸ್ಕ್ಯಾನಿಂಗ್ ಹಾಗೂ ಪರೀಕ್ಷೆಗಳಿಗೆ ಒಳಗಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ಮೇ 22ರಂದು ಚಿಕಿತ್ಸೆಗೆ ಸಂಬಂಧಿಸಿದಂತೆ ಲಂಡನ್​ಗೆ ತೆರಳಿದ್ದ ನವಾಜ್ ಷರೀಫ್, ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಇನ್ನು ಒಂದು ವಾರ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುವಂತೆ ಲಂಡನ್ ವೈದ್ಯರು ಸೂಚಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited