Untitled Document
Sign Up | Login    
Dynamic website and Portals
  
May 12, 2016

ಕರಾಚಿಯ ಕ್ಲಿಫ್ಟನ್​ ಉಪನಗರ ಬಂಗ್ಲೆಯಲ್ಲಿ ದಾವೂದ್ ವಾಸ

ನವದೆಹಲಿ : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ವಾಸವಾಗಿದ್ದಾನೆ ಎಂಬ ಭಾರತದ ವಾದಕ್ಕೆ ಮತ್ತಷ್ಟು ಪುಷ್ಟಿ ದೊರೆತಿದ್ದು, ಆತ ಕರಾಚಿಯ ಕ್ಲಿಫ್ಟನ್ ಉಪನಗರದ ಬೃಹತ್ ಬಂಗ್ಲೆಯೊಂದರಲ್ಲಿ ವಾಸಿಸುತ್ತಿರುವುದು ಮಾಧ್ಯಮವೊಂದರ ಕುಟುಕು ಕಾರ್ಯಾಚರಣೆಯಲ್ಲಿ ಬಯಲಾಗಿದೆ.

ಆಫ್ಘನ್ ನಿರಾಶ್ರಿತನೊಬ್ಬ ದಾವೂದ್ ಬಂಗ್ಲೆ ಇರುವ ಪ್ರದೇಶದ ಕುರಿತು ಸುಳಿವು ನೀಡಿದ್ದಾನೆ. ಆತ ನೀಡಿದ ಸುಳಿವಿನ ಮೇರೆಗೆ ತೆರಳಿದಾಗ ಬಂಗ್ಲೆ ಇರುವ ಜಾಗ ಪತ್ತೆಯಾಗಿದೆ ಎನ್ನಲಾಗಿದೆ.

ದಾವೂದ್ ಕರಾಚಿಯ ನಿವಾಸದಲ್ಲಿ ವಾಸವಿದ್ದಾನೆ ಎಂದು ಈ ಹಿಂದೆ ಹಲವು ಬಾರಿ ಭಾರತ ಹೇಳಿತ್ತು. ಇದಕ್ಕೆ ಪೂರಕ ದಾಖಲೆಗಳನ್ನೂ ನೀಡಿತ್ತು.ಆದಾಗ್ಯೂ ಪಾಕಿಸ್ತಾನ ಈ ವಿಚಾರವನ್ನು ನಿರಾಕರಿಸುತ್ತಲೇ ಬಂದಿತ್ತು. ಕಳೆದ 23 ವರ್ಷಗಳಿಂದಲೂ ದಾವೂದ್ ಕರಾಚಿಯಲ್ಲಿದ್ದಾನೆ ಎನ್ನಲಾಗಿದೆ.

ಕ್ಲಿಫ್ಟನ್​ ನ ಬಂಗ್ಲೆಯಲ್ಲಿ ದಾವೂದ್ ವಾಸವಿರುವುದನ್ನು ಪಾಕಿಸ್ತಾನದ ಕೆಲ ಅಧಿಕಾರಿಗಳೂ ಒಪ್ಪಿಕೊಂಡಿದ್ದಾರೆ. ಸ್ಥಳೀಯ ನಿವಾಸಿಗಳೂ ಇದನ್ನು ದೃಢೀಕರಿಸಿದ್ದಾರೆ ಎಂದು ಸುದ್ದಿವಾಹಿನಿ ತಿಳಿಸಿದೆ. ದಾವೂದ್ ಬಂಗ್ಲೆ ಸುತ್ತಲಿನ ಪ್ರದೇಶಗಳಲ್ಲಿ ವಾಸವಾಗಿರುವ ಹಲವು ನಾಗರಿಕರನ್ನೂ ಸಂದರ್ಶಿಸಲಾಗಿತ್ತು. ಕುಟುಕು ಕಾರ್ಯಾಚರಣೆಯ ವಿಡಿಯೋವನ್ನೂ ಬಿಡುಗಡೆ ಮಾಡಲಾಗಿದೆ. ಏತನ್ಮಧ್ಯೆ, ಪಾಕ್ ಸೇನಾ ಮುಖ್ಯಸ್ಥ ರಹೀಲ್ ಶರೀಫ್ ಜತೆ ದಾವೂದ್ ನಿಕಟ ಸಂಪರ್ಕ ಹೊಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.

ದಾವೂದ್​ನ ಬಂಗ್ಲೆ ಹಾಗೂ ಅದರ ಕಂಪೌಂಡ್ ಅಲ್​ಖೈದಾ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಅಬೊಟ್ಟಾಬಾದ್​ ನಲ್ಲಿ ವಾಸವಿದ್ದ ಬೃಹತ್ ಬಂಗ್ಲೆ ಮಾದರಿಯಲ್ಲೇ ಇದೆ. ಸುತ್ತಲೂ ಖಾಲಿ ಸೈಟ್ ಇದೆ. ಬಂಗ್ಲೆಯ ಆವರಣದಲ್ಲಿ ಮೂರು ಮೀಟರ್​ಗಿಂತಲೂ ಎತ್ತರದ ಕಂಪೌಂಡ್ ಇದೆ. ಒಟ್ಟಾರೆಯಾಗಿ, ದಾವೂದ್ ಬಂಗ್ಲೆ ಅಭೇದ್ಯ ಕೋಟೆಯಂತಿದೆ ಎಂದು ವರದಿ ತಿಳಿಸಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited