Untitled Document
Sign Up | Login    
Dynamic website and Portals
  
February 2, 2016

ನಟ,ಪದ್ಮಭೂಷಣ ಅನುಪಮ್‌ ಖೇರ್‌ ಗೆ ಪಾಕ್‌ ವೀಸಾ ನಿರಾಕರಣೆ

ನವದೆಹಲಿ : ಕರಾಚಿ ಸಾಹಿತ್ಯೋತ್ಸವಕ್ಕೆ ಆಹ್ವಾನಿತರಾಗಿರುವ, ಇತ್ತೀಚಿಗೆ ಪದ್ಮ ಭೂಷಣ ಪ್ರಶಸ್ತಿ ಪುರಸ್ಕೃತರಾಗಿರುವ ಬಾಲಿವುಡ್‌ ನಟ ಅನುಪಮ್‌ ಖೇರ್‌ ಅವರಿಗೆ ಪಾಕಿಸ್ತಾನ ವೀಸಾ ನಿರಾಕರಿಸಿದೆ.

ಅನುಪಮ್‌ ಖೇರ್‌ ಅವರು ಫೆಬ್ರವರಿ 5ರಂದು ಕರಾಚಿ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಕರಾಚಿ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಲಿದ್ದ ಒಟ್ಟು 18 ಮಂದಿಯ ಪೈಕಿ 17 ಮಂದಿಗೆ ವೀಸಾ ನೀಡಲಾಗಿದೆ. ಆದರೆ ಖೇರ್‌ ಅವರೊಬ್ಬರಿಗೆ ಮಾತ್ರವೇ ವೀಸಾ ನಿರಾಕರಿಲಾಗಿದೆ.

ನನಗೆ ತುಂಬಾ ದುಃಖ ಮತ್ತು ನಿರಾಶೆಯಾಗಿದೆ. ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಲಿದ್ದ ಒಟ್ಟು 18 ಮಂದಿಯ ಪೈಕಿ 17 ಮಂದಿಗೆ ವೀಸಾ ನೀಡಲಾಗಿದ್ದು ನನಗೆ ಮಾತ್ರ ವೀಸಾ ನಿರಾಕರಿಸಲಾಗಿದೆ ಎಂದು ಖೇರ್ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಪಾಕಿಸ್ತಾನ ಹೈ ಕಮಿಷನ್, ಅನುಪಮ್ ಖೇರ್ ಅವರು ವೀಸಾ ಅರ್ಜಿಯನ್ನು ಸಲ್ಲಿಸಿಲ್ಲ ಎಂದು ಹೇಳಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited