Untitled Document
Sign Up | Login    
Dynamic website and Portals
  
April 12, 2016

ಪಟಾಕಿ ನಿಷೇಧ ಕುರಿತು ಸರ್ವ ಪಕ್ಷಗಳ ಸಭೆ ಕರೆದ ಕೇರಳ ಸಿಎಂ

ತಿರುವನಂತಪುರಂ : ಕೊಲ್ಲಂ ಜಿಲ್ಲೆಯ ಪರವೂರ್ ಪುಟ್ಟಿಂಗಲ್ ದೇವಾಲಯದಲ್ಲಿ ಪಟಾಕಿಯಿಂದ ಸಂಭವಿಸಿದ ಬೆಂಕಿ ದುರಂತದ ರಕ್ಷಣಾ ಕಾರ್ಯಗಳಿಗಾಗಿ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಸರ್ಕಾರ ರು. 20 ಕೋಟಿ ಘೋಷಿಸಿದೆ.

ಮಾಧ್ಯಮದವರ ಜತೆ ಮಾತನಾಡಿದ ಚಾಂಡಿ ಇನ್ನು 13 ಮೃತದೇಹದ ಗುರುತು ಪತ್ತೆಯಾಗಲು ಬಾಕಿ ಇದೆ ಎಂದಿದ್ದಾರೆ. ಈವರೆಗೆ 1039 ಮಂದಿಗೆ ಚಿಕಿತ್ಸೆ ನೀಡಿದ್ದು 27 ಮಂದಿಯ ಸ್ಥಿತಿ ಗಂಭೀರವಾಗಿದೆ. ಅದೇ ವೇಳೆ ಅಪ್ಪ ಅಮ್ಮನನ್ನು ಕಳೆದುಕೊಂಡ ಮಕ್ಕಳಿಗೆ ಸರ್ಕಾರ ಅಭಯ ನೀಡುವುದಾಗಿ ಚಾಂಡಿ ಭರವಸೆ ನೀಡಿದ್ದಾರೆ.

ಏತನ್ಮಧ್ಯೆ, ಪಟಾಕಿ ನಿಷೇಧದ ಬಗ್ಗೆ ಚರ್ಚೆ ನಡೆಸಲು ಏಪ್ರಿಲ್ 14 ಗುರುವಾರ ಮಧ್ಯಾಹ್ನ 2 ಗಂಟೆಗೆ ಸರ್ವ ಪಕ್ಷಗಳ ಸಭೆ ಕರೆದಿರುವುದಾಗಿ ಅವರು ಹೇಳಿದ್ದು, ಪಟಾಕಿ ನಿಷೇಧ ಬೇಕೋ ಬೇಡವೋ ಎಂಬುದರ ಬಗ್ಗೆ ಎಲ್ಲ ಪಕ್ಷಗಳ ಅಭಿಪ್ರಾಯಗಳನ್ನು ಕೇಳಲಾಗುವುದು ಎಂದಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited