Untitled Document
Sign Up | Login    
Dynamic website and Portals
  
October 6, 2015

ಪ್ರಧಾನಿ ನರೇಂದ್ರ ಮೋದಿ ಅದ್ದೂರಿ ಸ್ವಾಗತಕ್ಕೆ ಸಿದ್ಧವಾಗುತ್ತಿರುವ ಲಂಡನ್ ವೆಂಬ್ಲಿ ಸ್ಟೇಡಿಯಂ

ಪ್ರಧಾನಿ ನರೇಂದ್ರ ಮೋದಿ (ಫೈಲ್ ಚಿತ್ರ) ಪ್ರಧಾನಿ ನರೇಂದ್ರ ಮೋದಿ (ಫೈಲ್ ಚಿತ್ರ)

ಲಂಡನ್ : ನವೆಂಬರ್ 13 ರಂದು ಲಂಡನ್ವೆಂಬ್ಲಿ ಸ್ಟೇಡಿಯಂನಲ್ಲಿ ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣ ಕೇಳಲು ಜನ ಉತ್ಸೂಕರಾಗಿದ್ದು ಟಿಕೇಟ್ ಗಾಗಿ, ಸ್ವಾಗತ ಸಹಭಾಗಿತ್ವವಹಿಸಲು, ಸಂಘಟಕರಾಗಲು, ಪ್ರಯೋಜಕರಾಗಲು ಜನ ಸರದಿ ಸಾಲುಗಳಲ್ಲಿ ನಿಲ್ಲುತ್ತಿದ್ದಾರೆ. ಒಲಿಂಪಿಕ್ ಕ್ರೀಡೆಗಳ ಉದ್ಘಾಟನಾ ಸಮಾರಂಭ ಮೀರಿಸುವಂತಹ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನದ ಅಗತ್ಯವಿದೆ.

ವಿಶೇಷ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿದೆ. ಆದರೆ ಸಮಸ್ಯೆ ಏನಂದರೆ ಭಾರತದ ಮೊದಲ ರಾಕ್ ಸ್ಟಾರ್ ಪ್ರಧಾನಿಯ ಭಾಷಣ ಕೇಳಲು ಉತ್ಸಾಹಿ ಜನರಿಗೆ ಸಾಕಾಗುವಷ್ಟು ವೆಂಬ್ಲಿ ಸ್ಟೇಡಿಯಂ ದೊಡ್ಡದಾಗಿಲ್ಲದೇ ಇರಬಹುದು. ಫುಟ್ ಬಾಲ್ ಫೈನಲ್ ಗಿಂತ ಹೆಚ್ಚು ಜನ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಬ್ರಿಟನ್ ಇತಿಹಾಸದಲ್ಲೇ ವಿದೇಶಿ ನಾಯಕನಿಗೆ ಈ ರೀತಿಯ ಅದ್ದೂರಿ ಸ್ವಾಗತ ಕೊಡುತ್ತಿರುವುದು ಇದೇ ಮೊದಲು. 1911 ರಲ್ಲಿ ಕಿಂಗ್ ಜಾರ್ಜ್ V ಮತ್ತು ಕ್ವೀನ್ ಮೇರಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೀಡಿದ ಸ್ವಾಗತವನ್ನು ಇದು ಮೀರಿಸಬಹುದು.

ಯುರೋಪ್ ನ ಬೇರೆ ಬೇರೆ ಭಾಗಗಳಿಂದ ಈ ಕಾರ್ಯಕ್ರಮಕ್ಕೆ ಲಂಡನ್ ಗೆ ಜನರು ಆಗಮಿಸಲಿದ್ದಾರೆ ಎಂದು ಯುರೋಪ್ ಭಾರತ ವೇದಿಕೆ ಹೇಳಿದೆ.

ಸ್ವಾಗತಕ್ಕೆ ಬ್ರಿಟಿಷ್ ಭಾರತೀಯ ಕಲಾವಿದರನ್ನು ಒಳಗೊಂಡಿರುವ ವಿಶೇಷವಾಗಿ ನಿರ್ಮಿಸಿರುವ ಎರಡು ಮಹಾನ್ ರಾಷ್ಟ್ರಗಳು, ವೈಭವದ ಭವಿಷ್ಯ ಎಂಬ ವಿಷಯದ ಸಾಂಸ್ಕೃತಿಕ ಕಾರ್ಯಕ್ರಮ ಇರಲಿದೆ. ಈ ಸಮಯದಲ್ಲೇ ದೀಪಾವಳಿ ಹಬ್ಬವಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ನಂತರ ದೇಶದ ಅತ್ಯಂತ ದೊಡ್ಡ ಪಟಾಕಿ ಪ್ರದರ್ಶನ ನಿರೀಕ್ಷಿಸಲಾಗಿದೆ.

ನಾವು ರಾತ್ರಿಯನ್ನು ದಿನ ಮಾಡುತ್ತೇವೆ ಎಂದು ಸಂಘಟಕರು ಹೇಳಿದ್ದಾರೆ.

ಸ್ವಾಗತ ಸಹಯೋಗಕ್ಕೆ ಆಸಕ್ತಿ ಇರುವ ಯುಕೆ ಸಮುದಾಯ ಸಂಘಟನೆಗಳು www.ukwelcomesmodi.org ವೆಬ್ ಸೈಟ್ ನಲ್ಲಿ ನೋಂದಾಯಿಸಬಹುದು. ಕಾರ್ಯಕ್ರಮದ ಕುರಿತ ಮಾಹಿತಿಗಳನ್ನು ಟ್ವಿಟ್ಟರ್ ಹ್ಯಾಂಡ್ಲ್ @ukwelcomesmodi ಮೂಲಕ ತಿಳಿಸಲಾಗುವುದು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited