Untitled Document
Sign Up | Login    
Dynamic website and Portals
  
April 6, 2016

ಭಾರತ ಸ್ವತಃ ಮತ್ತು ವಿಶ್ವಕ್ಕೆ ದಿಗ್ಭ್ರಮೆಯುಂಟುಮಾಡುವ ಅಂಚಿನಲ್ಲಿದೆಃ ಅಮೆರಿಕಾ

ಪ್ರಧಾನಿ ನರೇಂದ್ರ ಮೋದಿ (ಫೈಲ್ ಚಿತ್ರ) ಪ್ರಧಾನಿ ನರೇಂದ್ರ ಮೋದಿ (ಫೈಲ್ ಚಿತ್ರ)

ವಾಷಿಂಗ್ಟನ್ : ಭಾರತದ ನಾವೀನ್ಯತೆ ಮತ್ತು ಉದ್ಯಮಶೀಲತೆ ಬಗ್ಗೆ ಭಾವೋದ್ರಿಕ್ತ ಆಸಕ್ತಿ ಮತ್ತು ಬೆಳೆಯುತ್ತಿರುವ ಸ್ಪಂದನ ನೋಡುತ್ತಿದ್ದರೆ ಭಾರತ ಸ್ವತಃ ಮತ್ತು ವಿಶ್ವಕ್ಕೆ ದಿಗ್ಭ್ರಮೆಯುಂಟುಮಾಡುವ ಅಂಚಿನಲ್ಲಿದೆ ಎಂದನಿಸುತ್ತದೆ ಎಂದು ಉನ್ನತ ಅಮೆರಿಕನ್ ರಾಯಭಾರಿ ಚಾರ್ಲ್ಸ್ ಎಚ್ ರಿವ್ಕಿನ್ ಹೇಳಿದ್ದಾರೆ.

ಭಾರತ ತನಗೆ ತಾನೇ ಮತ್ತು ವಿಶ್ವಕ್ಕೆ ದಿಗ್ಭ್ರಮೆಯುಂಟುಮಾಡುವ ಅಂಚಿನಲ್ಲಿದೆ. ಈ ಸುಸಂದರ್ಭದಲ್ಲಿ ಅಮೆರಿಕಾ ಭಾರತದ ಪಾಲುದಾರರಾಗಿರಲು ಸಿದ್ದವಿದೆ ಎಂದು ಅಮೇರಿಕಾ ಎಕಾನಾಮಿಕ್ ಆಂಡ್ ಬ್ಯುಸಿನೆಸ್ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ರಿವ್ಕಿನ್ ಹೇಳಿದ್ದಾರೆ.

ರಿವ್ಕಿನ್ ಅವರು ಇತ್ತೀಚೆಗೆ ಆರ್ಥಿಕ ಬೆಳವಣಿಗೆಗಾಗಿ, ಕಾರ್ಪೊರೇಟ್ ವಲಯದ ಪ್ರತಿನಿಧಿಗಳನ್ನೊಳಗೊಂಡ ಉನ್ನತಾಧಿಕಾರದ ಅಮೆರಿಕಾದ ನಿಯೋಗ ಜೊತೆ ಅಮೆರಿಕನ್ ಇನ್ನೋವೇಶನ್ ರೋಡ್ ಶೋ ಗಾಗಿ ಭಾರತಕ್ಕೆ ಬಂದಿದ್ದರು. ದೆಹಲಿ, ಗುರಗಾಂವ್, ಹೈದರಾಬಾದ್ ಮತ್ತು ಅಹಮದಾಬಾದ್ ಗಳಲ್ಲಿ ರೋಡ್ ಶೋ ನಡೆಸಲಾಗಿತ್ತು.

ಅಲ್ಲಿ ನಾನು ಕಂಡಿದ್ದರಿಂದ ಪ್ರಭಾವಿತನಾಗಿದ್ದೇನೆ, ಎಂದು ರಿವ್ಕಿನ್ ಯುದ್ಧತಂತ್ರ ಮತ್ತು ಅಂತಾರಾಷ್ಟ್ರೀಯ ಅಧ್ಯಯನಗಳ ಕೇಂದ್ರ ( CSIS ನ ), ಒಂದು ಉನ್ನತ ಅಮೆರಿಕನ್ ಚಿಂತಕರ ಚಾವಡಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ನಾವು ಭೇಟಿ ಮಾಡಿದ ಪ್ರತಿ ಘಟಕಗಳಲ್ಲಿ ನಮ್ಮ ನಿಯೋಗ, ವಿಶೇಷವಾಗಿ ಸೌರ ಕಂಪನಿಗಳ ಸದಸ್ಯರು ಸ್ಪಷ್ಟವಾದ ವಾಣಿಜ್ಯ ಮತ್ತು ಬಂಡವಾಳ ಅವಕಾಶಗಳು ಗುರುತಿಸಿದ್ದಾರೆ ಎಂದು ರಿವ್ಕಿನ್ ಹೇಳಿದ್ದಾರೆ.

ವಾಣಿಜ್ಯ ಮತ್ತು ಉದ್ಯಮ ವ್ಯವಹಾರಗಳ ವಿಶೇಷ ಅಮೇರಿಕಾದ ಪ್ರತಿನಿಧಿ ರಾಜ್ಯ ಇಲಾಖೆ ಝಿಯಾದ್ ಹೈದರ್ ಸಹ ನಿಯೋಗದ ಭಾಗವಾಗಿದ್ದರು.

ನಾವೀನ್ಯತೆ ಮತ್ತು ಉದ್ಯಮಶೀಲತೆ ನಮ್ಮೆರಡು ದೇಶಗಳನ್ನು ಒಟ್ಟಿಗೆ ಬಂಧಿಸುತ್ತದೆ ಎನ್ನುವುದನ್ನು ನಾನು ಎಲ್ಲಾ ಸಭೆಗಳಲ್ಲಿ ಅನುಭವಿಸಿದ್ದೇನೆ. ವಾಸ್ತವವಾಗಿ, ಅಮೆರಿಕನ್ನರು ಮತ್ತು ಭಾರತೀಯ ಉದ್ಯಮಿಗಳು ನಾವೀನ್ಯತೆ ಎನ್ನುವ ಸಂಸ್ಕೃತಿಯನ್ನು ಹಂಚಿಕೊಂಡಿದ್ದಾರೆಂದರು.

ಶುದ್ಧ ಇಂಧನ ಕ್ಷೇತ್ರದಲ್ಲಿ ಮಾತ್ರವಲ್ಲದೇ ಎಲ್ಲ ಕ್ಷೇತ್ರಗಳಲ್ಲಿ ಎರಡೂ ದೇಶಗಳ ಜನರ ಮಧ್ಯೆ ಬಾಂಧವ್ಯ ಬೆಳೆಯಲು ನಾವು ಬೆಂಬೆಸಲೇ ಬೇಕು. ಮೋದಿ ಸರಕಾರ 2022ರ ಹೊತ್ತಿಗೆ ನವೀಕರಿಸಬಹುದಾದ ಶಕ್ತಿಯನ್ನು 175 ಗಿಗಾವ್ಯಾಟ್ಸ್ ತಲುಪುವ ಗುರಿ ಹೊಂದಿದೆ ಎಂದು ರಿವ್ಕಿನ್ ತಿಳಿಸಿದರು.

ಗುಜರಾತ್, ಆಂದ್ರಪ್ರದೇಶದ ಮುಖ್ಯಮಂತ್ರಿಗಳ ಜೊತೆ ಮತ್ತು ತೆಲಂಗಾಣದ ಸಚಿವರ ಜೊತೆ ತಮ್ಮ ಮಾತುಕತೆಗಳ ಅನುಭವ ಹಂಚಿಕೊಂಡ ರಿವ್ಕಿನ್, ಅವರೆಲ್ಲರೂ ಖಾಸಗಿ ಹೂಡಿಕೆಯ ಅಪೇಕ್ಷೆಯಲ್ಲಿದ್ದಾರೆ ಎಂದು ತಿಳಿಸಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited