ಕೈರೋ : ಅಲೆಗ್ಸಾಂಡ್ರಿಯಾದಿಂದ ಈಜಿಪ್ಟ್ ರಾಜಧಾನಿ ಕೈರೋಗೆ ತೆರಳುತ್ತಿದ್ದ 80 ಮಂದಿ ಪ್ರಯಾಣಿಕರಿದ್ದ ಈಜಿಪ್ಟ್ ಏರ್ ದೇಶೀಯ ವಿಮಾನವನ್ನು ಹೈಜಾಕ್ ಮಾಡಲಾಗಿದೆ.
ಅಲೆಂಗ್ಸಾಂಡ್ರಿಯಾದಿಂದ ಕೈರೋಗೆ ತೆರಳುತ್ತಿದ್ದ ಈಜಿಪ್ಟ್ ಏರ್ ಎ320 ವಿಮಾನವನ್ನು ಸ್ಥಳೀಯ ಕಾಲಮಾನ ಪ್ರಕಾರ ಬೆಳಗ್ಗೆ 8 ಗಂಟೆಗೆ ಹೈಜಾಕ್ ಮಾಡಿರುವ ದುಷ್ಕರ್ಮಿಗಳು ವಿಮಾನವನ್ನು ಸೈಪ್ರಸ್ ನ ಲಾರ್ನಾಕ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿದ್ದಾರೆ ಎಂದು ಏರ್ ಲೈನ್ಸ್ ನ ವಕ್ತಾರರು ತಿಳಿಸಿದ್ದಾರೆ.
ವಿಮಾನ ಟೇಕಾಫ್ ಆದ ಒಂದು ಗಂಟೆಯೊಳಗೆ ದುಷ್ಕರ್ಮಿಗಳು ವಿಮಾನವನ್ನು ಹೈಜಾಕ್ ಮಾಡಿದ್ದಾರೆ, ವಿಮಾನದಲ್ಲಿ 80 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದೆ.
ಇತ್ತೀಚಿನ ವರದಿ ಪ್ರಕಾರ ವಿಮಾನದಲ್ಲಿದ್ದ 20 ಮಂದಿ ಮಹಿಳೆಯರನ್ನು ಮತ್ತು ಮಕ್ಕಳನ್ನು ಶಸ್ತ್ರಧಾರಿ ವಿಮಾನ ಅಪಹರಣಕಾರರು ಹೊರಗೆ ಬಿಟ್ಟಿದ್ದಾರೆ ಎನ್ನಲಾಗಿದೆ.