Untitled Document
Sign Up | Login    
Dynamic website and Portals
  
March 15, 2016

ಭಾರತೀಯ ವಿದ್ಯಾರ್ಥಿಗಳು ತುಂಬಾ ಬುದ್ಧಿವಂತರುಃ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್ : ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಕಲಿಯುತ್ತಿರುವ ಭಾರತೀಯ ವಿದ್ಯಾರ್ಥಿಗಳನ್ನು ಹೊರಗಟ್ಟಬೇಕಾಗಿಲ್ಲ, ಅವರಂತ ಬುದ್ಧಿವಂತರು ಅಮೆರಿಕಕ್ಕೆ ಅವರು ಯಾವತ್ತೂ ಬೇಕು ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್‌ ಅಭ್ಯರ್ಥಿಯಾಗಲು ಮುಂಚೂಣಿಯಲ್ಲಿರುವ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಹೇಳಿಕೆಯ ಮೂಲಕ ಟ್ರಂಪ್‌ ವಲಸೆ ನೀತಿಯನ್ನು ಸರಿಪಡಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.

ನಮಗಿಷ್ಟವಿದೆಯೋ ಇಲ್ಲವೋ ಆ ಮಾತು ಬೇರೆ. ಒಟ್ಟಾರೆಯಾಗಿ ಹೇಳುವುದಾದರೆ ನಾವು ವಿದೇಶಗಳ ಬಹಳಷ್ಟು ಮಂದಿಗೆ ಅಮೆರಿಕದಲ್ಲಿ ಉನ್ನತ ಶಿಕ್ಷಣ ನೀಡುತ್ತಿದ್ದೇವೆ. ಅವರೆಲ್ಲ ತುಂಬಾ ಬುದ್ಧಿವಂತರು. ಅಂತವರು ದೇಶಕ್ಕೆ ಬೇಕು ಎಂದು 69ರ ಹರೆಯದ ಟ್ರಂಪ್‌ ಅವರು ಫಾಕ್ಸ್‌ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಅವರು ದೇಶದೊಳಗೆ ಬರುವಂತಿಲ್ಲ. ನೇರವಾಗಿ ಹಾರ್ವರ್ಡ್‌ಗೆ ಹೋಗುತ್ತಾರೆ. ಅಲ್ಲಿ ಅವರು ತಮ್ಮ ತರಗತಿಗಳಲ್ಲಿ ಪ್ರಥಮ ಸ್ಥಾನ ಪಡೆಯುತ್ತಾರೆ. ಇಲ್ಲಿಂದ ಅವರು ತಮ್ಮ ದೇಶಕ್ಕೆ ಮರಳಿದಾಗ ಅಲ್ಲಿ ಕಂಪೆನಿಗಳನ್ನು ತೆರೆಯುತ್ತಾರೆ ಅಲ್ಲದೆ ತುಂಬಾ ಜನರಿಗೆ ಉದ್ಯೋಗ ಕೊಡುತ್ತಾರೆ ಎಂದು ಟ್ರಂಪ್‌ ಹೇಳಿದರು.

ಟ್ರಂಪ್‌ ಅವರು ತಮ್ಮ ಪ್ರಚಾರದ ಆರಂಭದ ದಿನಗಳಲ್ಲಿ ಎಚ್‌-1ಬಿ ವೀಸಾ ಕಾರ್ಯಕ್ರಮವನ್ನು ರದ್ದು ಮಾಡಬೇಕು, ಭಾರತೀಯರು ಅಮೆರಿಕನ್ನರ ಉದ್ಯೋಗಾವಕಾಶಗಳನ್ನು ಕಿತ್ತುಕೊಳ್ಳುತ್ತಿದ್ದಾರೆ ಎಂದು ಆರೋಪಿಸುತ್ತಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited