Untitled Document
Sign Up | Login    
Dynamic website and Portals
  
October 14, 2015

ಸುಭಾಷಚಂದ್ರ ಬೋಸ್ ಕುಂಟುಂಬದವರನ್ನು ಭೇಟಿ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ

ನೇತಾಜಿ ಸುಭಾಷಚಂದ್ರ ಬೋಸ್ (ಫೈಲ್ ಚಿತ್ರ) ನೇತಾಜಿ ಸುಭಾಷಚಂದ್ರ ಬೋಸ್ (ಫೈಲ್ ಚಿತ್ರ)

ನವದೆಹಲಿ : ನೇತಾಜಿ ಸುಭಾಷಚಂದ್ರ ಬೋಸ್ ಅವರ ನಿಗೂಢ ಸಾವಿನ ರಹಸ್ಯವನ್ನು ಬಹಿರಂಗಗೊಳಿಸಬೇಕು ಎನ್ನುವ ಬೇಡಿಕೆ ಇರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೇತಾಜಿ ಸುಭಾಷಚಂದ್ರ ಬೋಸ್ ಅವರ್ ಕುಟುಂಬದವರನ್ನು ಬುಧವಾರ ಭೇಟಿ ಮಾಡಲಿದ್ದಾರೆ.

ಪ್ರಧಾನಿ ಮೋದಿ ಅವರು ಈ ಭೇಟಿಯ ಬಗ್ಗೆ ಮಂಗಳವಾರ ಟ್ವೀಟ್ ಮಾಡಿ ದೃಢಪಡಿಸಿದ್ದಾರೆ. ನಾಳೆ ತುಂಬಾ ವಿಶೇಷ ದಿನ. ನಾನು ಸುಭಾಷ ಬಾಬು ಅವರ ಕುಟುಂಬದ ಸದಸ್ಯರನ್ನು ನನ್ನ ಮನೆಯಲ್ಲಿ ಭೇಟಿ ಮಾಡಲಿದ್ದೇನೆ. ಅವರಿಗೆ ಆತಿಥ್ಯ ನೀಡುವುದು ಒಂದು ಗೌರವ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಸುಭಾಷಚಂದ್ರ ಬೋಸ್ ಕುಟುಂಬದವರು ಅವರ ಸಾವಿನ ರಹಸ್ಯವನ್ನು ಬಹಿರಂಗಪಡಿಸಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡುವ ನಿರೀಕ್ಷೆ ಇದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟಂಬರ್ ತಿಂಗಳ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸುಭಾಷಚಂದ್ರ ಬೋಸ್ ಕುಟುಂಬದ ಸುಮಾರು 50ಕ್ಕೂ ಹೆಚ್ಚು ಸದಸ್ಯರನ್ನು ಅಕ್ಟೋಬರ್ ನಲ್ಲಿ ಭೇಟಿ ಮಾಡಲಿದ್ದೇನೆ ಎಂದು ತಿಳಿಸಿದ್ದರು.

ಬೇರೆ ಬೇರೆ ದೇಶದಿಂದ ಸುಭಾಷ ಬಾಬು ಕುಟುಂಬದ ಸುಮಾರು 50ಕ್ಕೂ ಹೆಚ್ಚು ಸದಸ್ಯರು ಬರುತ್ತಿದ್ದಾರೆ. ನಾನು ಅವರನ್ನು ಸ್ವಾಗತಿಸಲು ಖುಷಿಯಿಂದಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದರು.

ರಷ್ಯಾ, ಜಪಾನ್, ಚೀನಾ, ಅಮೇರಿಕಾ, ಯುಕೆ, ಸಿಂಗಪೂರ್ ಮಲೇಶಿಯಾ ದೇಶಗಳಲ್ಲಿರುವ ನೇತಾಜಿಗೆ ಸಂಬಂಧಪಟ್ಟ ಕಡತಗಳನ್ನು ಬಹಿರಂಗಗೊಳಿಸುವಂತೆ ಪ್ರಧಾನಿ ಅವರು ಪತ್ರ ಬರೆಯಬೇಕೆಂದು ನಮ್ಮ ಕುಟುಂಬದವರು ಪ್ರಧಾನಿಯವರಲ್ಲಿ ಮನವಿ ಮಾಡುತ್ತೇವೆ ಎಂದು ಬೋಸ್ ಅವರ್ ಮೊಮ್ಮಗ ಚಂದ್ರ ಬೋಸ್ ಹೇಳಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited