ಪಟ್ನಾ : ಬಿಹಾರ ವಿಧಾನಸಭೆಯ ಮೊದಲ ಹಂತದ ಮತದಾನ ಸೋಮವಾರ ಬೆಳಗ್ಗೆ 49 ಕ್ಷೇತ್ರಗಳಲ್ಲಿ ಆರಂಭಗೊಂಡಿದೆ.
ಮೊದಲ ಹಂತದಲ್ಲಿ ಸುಮಾರು 1.35 ಕೋಟಿ ಮಂದಿ ಮತದಾರರು 49 ಮಂದಿ ಶಾಸಕರನ್ನು ಆಯ್ಕೆ ಮಾಡಲಿದ್ದು ಕಣದಲ್ಲಿ 583 ಅಭ್ಯರ್ಥಿಗಳ ಪೈಕಿ 54 ಮಂದಿ ಮಹಿಳೆಯರು.
ಬೆಳಗ್ಗೆ 9 ಗಂಟೆಯವರೆಗೆ ಶೇಕಡಾ 13 ರಷ್ಟು ಮತದಾನ ನಡೆದಿದೆ. ಮತದಾನ ಶಾಂತಿಯುತವಾಗಿದೆ ಎಂದು ಹೆಚ್ಚುವರಿ ಮುಖ್ಯ ಚುನಾವಣಾ ಧಿಕಾರಿ ತಿಳಿಸಿದ್ದಾರೆ.
ಎಲ್ಲರೂ ಅತೀ ಹೆಚ್ಚು ಸಂಖ್ಯೆಯಲ್ಲಿ ಮತದಾನ ಮಾಡಿ. ಅದರಲ್ಲೂ ಯುವ ಜನತೆ ಮತದಾನ ಮಾಡಬೇಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.