Untitled Document
Sign Up | Login    
Dynamic website and Portals
  
October 6, 2015

ಬಿಹಾರ್ ವಿಧಾನಸಭೆ ಚುನಾವಣೆಃ ಬಿಜೆಪಿ ಮೈತ್ರಿಕೂಟಕ್ಕೆ ಅತೀ ಹೆಚ್ಚು ಸ್ಥಾನ - ಸಮೀಕ್ಷೆ

ಪಾಟ್ನಾ : ಬಿಹಾರ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿ ಎ ಮೈತ್ರಿಕೂಟಕ್ಕೆ 147 ಸ್ಥಾನಗಳು ಮತ್ತು ನಿತೀಶ್ ಕುಮಾರ್ ನೇತೃತ್ವದ ಮೈತ್ರಿಕೂಟಕ್ಕೆ 64 ಸ್ಥಾನಗಳು ಲಭಿಸಲಿವೆ ಎಂದು ಇತ್ತೀಜಿನ ಸಮೀಕ್ಷೆ ತಿಳಿಸಿದೆ. ಜೀ ಮಿಡಿಯಾ ಗ್ರೂಪ್ ಸೆಪ್ಟಂಬರ್ 29 ಮತ್ತು 30 ರಂದು ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ತಿಳಿದು ಬಂದಿದೆ.

ಸಮೀಕ್ಷೆಯ ಪ್ರಕಾರ ಶೇ 53.8 ಜನರು ಬಿಜೆಪಿ ನೇತೃತ್ವದ ಎನ್ ಡಿ ಎ ಅಧಿಕಾರಕ್ಕೆ ಬರಲಿದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಶೇ 40.2 ಜನರು ನಿತೀಶ್ ಕುಮಾರ್ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.

ಬಿಹಾರದ 57.4 % ಹಿಂದುಗಳು ಬಿಜೆಪಿ ನೇತೃತ್ವದ ಎನ್ ಡಿ ಎ ಬೆಂಬಲಿಸುವುದಾಗಿ ಹೇಳಿದ್ದು, 36% ಹಿಂದುಗಳು ನಿತೀಶ್ ಕುಮಾರ್ ಬಣವನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.

35.9 % ಮುಸ್ಲೀಂ ಬಾಂಧವರು ಬಿಜೆಪಿ ನೇತೃತ್ವದ ಎನ್ ಡಿ ಎ ಬೆಂಬಲಿಸುವುದಾಗಿ ಹೇಳಿದ್ದು 57.9% ಮುಸ್ಲೀಂ ಬಾಂಧವರು ನಿತೀಶ ವರ ಮೈತ್ರಿಕೂಟಕ್ಕೆ ಮತ ನೀಡುವುದಾಗಿ ಹೇಳಿದ್ದಾರೆ.

58.1 % ಮಹಿಳೆಯರು ಎನ್ ಡಿ ಎ ಬೆಂಬಲಿಸುವುದಾಗಿ ಹೇಳಿದ್ದು, 35.2 % ಮಹಿಳೆಯರು ನಿತೀಶ್ ಕುಮಾರ್ ಅವರ ಮಹಾಮೈತ್ರಿಗೆ ಮತ ನೀಡುವುದಾಗಿ ಹೇಳಿದ್ದಾರೆ.

ಅಕ್ಟೋಬರ್ 12, 16, 28, ನವೆಂಬರ್‌1 ಮತ್ತು 5, ಒಟ್ಟು 5 ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ನವೆಂಬರ್ 8ರಂದು ಮತ ಎಣಿಕೆ ನಡೆದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited