Untitled Document
Sign Up | Login    
Dynamic website and Portals
  
September 9, 2015

ಬಿಹಾರ್ ವಿಧಾನಸಭೆ ಚುನಾವಣಾ ವೇಳಾಪಟ್ಟಿ ಪ್ರಕಟ

ಮುಖ್ಯ ಚುನಾವಣಾ ಆಯುಕ್ತ ನಸೀಮ್ ಝೈದಿ ಮುಖ್ಯ ಚುನಾವಣಾ ಆಯುಕ್ತ ನಸೀಮ್ ಝೈದಿ

ನವದೆಹಲಿ : ಬಿಹಾರ್ ವಿಧಾನಸಭಾ ಚುನಾವಣಾ ವೇಳಾ ಪಟ್ಟಿಯನ್ನು ಚುನಾವಣಾ ಅಯೋಗ ಬುಧವಾರ ಬಿಡುಗಡೆ ಮಾಡಿದೆ. 5 ಹಂತಗಳಲ್ಲಿ ಅಕ್ಟೋಬರ್ ನಲ್ಲಿ ನಡೆಯಲಿರುವ ಚುನಾವಣೆಯ ಮತ ಎಣಿಕೆ ನ. 8 ರಂದು ನಡೆಯಲಿದೆ.

ಮೊದಲನೇ ಹಂತ ಅಕ್ಟೋಬರ್ 12, ಎರಡನೇ ಹಂತ ಅ. 16 ರಂದು, ಮೂರನೇ ಹಂತ ಅ. 28ರಂದು, ನಾಲ್ಕನೇ ಹಂತ ನ. 1 ರಂದು ಮತ್ತು ಐದನೇ ಹಂತ ನ. 5 ರಂದು ರಂದು ನಡೆಯಲಿದೆ.

ಚುನಾವಣಾ ಸಮಯದಲ್ಲಿ ಭದ್ರತಾ ವ್ಯವಸ್ಥೆಯ ಬಗ್ಗೆ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ನಸೀಮ್ ಝೈದಿ, ಅರಸೇನಾ ಪಡೆಗಳು ಎಲ್ಲಾ ಮತಗಟ್ಟೆಗಳಲ್ಲಿ ಕಾವಲು ಕಾಯಲಿವೆ. ರಾಜ್ಯದ ಎಲ್ಲಾ ಪಕ್ಷಗಳೂ ಸಿ ಅರ್ ಎಫ್, ಸಿ ಐ ಎಸ್ ಎಫ್ ಮತ್ತು ಬಿ ಎಸ್ ಎಫ್ ಪಡೆಗಳು ಮತದಾನದ ಸಮಯದಲ್ಲಿ ಬೇಕು ಎಂದು ಬೇಡಿಕೆ ಇಟ್ಟಿದ್ದರು. ಕನಿಷ್ಠ 47 ಕ್ಷೇತ್ರಗಳು ಎಡಪಂಥೀಯ ಉಗ್ರಗಾಮಿಗಳ ಪ್ರಭಾವಕ್ಕೆ ಒಲಗಾಗಿದ್ದು, ಈ ಕ್ಷೇತ್ರಗಳ ರಕ್ಷಣೆ ನಮ್ಮ ಕಾರ್ಯಸೋಚಿಯ ಆದ್ಯತೆ ಎಂದು ಹೇಳಿದರು.

ಹಣ ನೀಡಿ ಹಾಕುವ ಸುದ್ದಿ ಸೇರಿದಂತೆ ಮತದಾರರಿಂದ ಹಣ ದುರ್ಬಳಕೆ ತಡೆಯುವುದು ನಮ್ಮ ತಂತ್ರ. 9 ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳನ್ನು ನಗದು ಮತ್ತು ಮದ್ಯ ಚಲನೆಯ ಮೇಲೆ ನಿಗಾ ಇಡಲು ನಿಯೋಜಿಸಲಾಗಿದೆ. ಬಿಹಾರದಲ್ಲಿ ಒಟ್ಟು 6.68ಕೋಟಿ ಜನರು ಮತದಾನ ಮಾಡಲು ಅರ್ಹತೆ ಹೊಂದಿದ್ದರೆ ಎಂದು ಝೈದಿ ಹೇಳಿದರು.

ಈ ಸಲ ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರ ಅಭ್ಯರ್ಥಿಗಳ ಭಾವಚಿತ್ರವನ್ನು ಹೊಂದಿರುತ್ತದೆ ಎಂದು ತಿಳಿಸಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited