Untitled Document
Sign Up | Login    
Dynamic website and Portals
  
September 5, 2015

ಏಕ ಶ್ರೇಣಿ-ಏಕ ಪಿಂಚಣಿ ಯೋಜನೆ ಘೋಷಣೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಶನಿವಾರ ಮಾಜಿ ಸೈನಿಕರಿಗೆ ಏಕ ಶ್ರೇಣಿ, ಏಕ ಪಿಂಚಣಿ ಯೋಜನೆ ಜಾರಿಗೆ ತರುವುದಾಗಿ ಘೋಷಿಸಿದೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಕ್ಷಣಾ ಸಚಿವ, ಮನೋಹರ ಪಾರಿಕ್ಕರ್ ಅವರು ಈ ವಿಷಯ ತಿಳಿಸಿದರು.

ಪಾರಿಕ್ಕರ್ ಅವರ ಘೋಷಣೆಯ ಮುಖ್ಯಾಂಶಗಳುಃ

* ಈ ಯೋಜನೆ 2014ರ ಜುಲೈ 1ರಿಂದ ಅನ್ವಯವಾಗುವಂತೆ ಜಾರಿಯಾಗುತ್ತದೆ.
* ಬಾಕಿ ಇರುವ ಹಣವನ್ನು ಯೋಧರ ವಿಧವೆಯರಿಗೆ ಒಂದೇ ಕಂತಿನಲ್ಲಿ ಕೊಡಲಾಗುವುದು ಮತ್ತು ಉಳಿದವರಿಗೆ 4 ಅರ್ಧ ವಾರ್ಷಿಕ ಕಂತುಗಳಲ್ಲಿ ಪಾವತಿಸಲಾಗುತ್ತದೆ.
* ಮಾಜಿ ಸೈನಿಕರಿಗೆ ಪಿಂಚಣಿಯನ್ನು ಪ್ರತಿ 5 ವರ್ಷಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ.
* ಸ್ವಯಂ ನಿವೃತ್ತರಾದವರಿಗೆ ಈ ಯೋಜನೆ ಅನ್ವಯಿಸುವುದಿಲ್ಲ.
* ಯೋಜನೆಯನ್ನು ಕಾರ್ಯಗತಗೊಳಿಸಲು ಅಂದಾಜು ವೆಚ್ಚ 8 ಸಾವಿರ ಕೋಟಿ ರೂ ಇಂದ 10 ಕೋಟಿ ಸಾವಿರ ರೂ.

ಈ ಯೋಜನೆಯ ಘೋಷಣೆಯಿಂದ 42 ವರ್ಷಗಳ ಹೋರಾಟ ಕೊನೆಗೂ ಅಂತ್ಯ ಕಂಡಂತಾಗಿದೆ.

ಸರಕಾರ ಈ ಯೋಜನೆಯನ್ನು ಜಾರಿಗೆ ತಂದಿರುವುದರ ಬಗ್ಗೆ ಸಂಅತಸ ವ್ಯಕ್ತಪಡಿಸಿ ದೇಶಾದ್ಯಂತ ಸಹಸ್ರಾರು ನಿವೃತ್ತ ಯೋಧರು ಸಂಭ್ರಾಮಾಚರಣೆ ಮಾಡಿತ್ತಿದ್ದರೂ ಕೆಲವು ಹಿರಿಯ ಯೋಧರು ಸರಕಾರದ ಘೋಷಣೆಯನ್ನು ತಿರಸ್ಕರಿಸಿದ್ದು, ಜಂತರ್ ಮಂತರ್ ನಲ್ಲಿ ತಮ್ಮ ಮುಷ್ಕರ ಮುಂದುವರಿಸುವುದಾಗಿ ಹೇಳಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited