ನವದೆಹಲಿ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಬುಧವಾರ ಲಲಿತ್ ಗೇಟ್ ಬಗ್ಗೆ ಮಾಡಿದ ಭಾಷಣದ ಮುಖ್ಯಾಂಶಗಳು ರೋಮನ್ ಲಿಪಿಯಲ್ಲಿ ಬರೆಯಲಾಗಿತ್ತು.
ರೋಮನ್ ಲಿಪಿಯಲ್ಲಿ ಬರೆದಿದ್ದ ಹಾಳೆಗಳು ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದು, ಈ ಚಿತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಅಲ್ಲದೆ, 'ಮೂರು ರಹಸ್ಯ ಕೋತಿಗಳು' ಎಂದು ಬರೆದಿದ್ದ ಪೇಪರ್ ತುಣುಕೊಂದನ್ನು ರಾಹುಲ್ ಹಲವು ಬಾರಿ ನೋಡಿದರೂ ಅದನ್ನು ಸರಾಗವಾಗಿ ಓದಲು ವಿಫಲರಾದರು ಎಂದು ಇಂಡಿಯನ್ಯೂಸ್.ಕಾಂ ವರದಿ ಮಾಡಿದೆ.
ಸಾಮಾನ್ಯವಾಗಿ ರಾಹುಲ್ ಗಾಂಧಿ ಪಾರ್ಲಿಮೆಂಟ್ ಇರಲಿ, ಸಾರ್ವಜನಿಕ ಸಭೆ ಅಥವಾ ಪತ್ರಿಕಾ ಗೋಷ್ಟಿ ಇರಲಿ ಮೊದಲೇ ಬರೆದು ತಂದ ಭಾಷಣ / ಪ್ರತಿಗಳನ್ನೇ ಓದುವ ಅಭ್ಯಾಸ ಇಟ್ಟುಕೊಂಡಿದ್ದಾರೆ.
ಇತ್ತೀಚೆಗೆ ನೇಪಾಳದಲ್ಲಿ ಭೂಕಂಪ ಸಂಭವಿಸಿದ ಸಂದರ್ಭದಲ್ಲಿ ರಾಹುಲ್ ನೇಪಾಳದ ರಾಯಭಾರಿ ಕಚೇರಿಗೆ ತೆರಳಿ ಸಂತ್ರಸ್ಥರಿಗೆ ಸಂತಾಪ ಸೂಚಕ ಸಂದೇಶವನ್ನು ತನ್ನ ಮೊಬೈಲ್ ಫೋನ್ ನಿಂದ ನಕಲು ಮಾಡಿ ಮರೆದದ್ದು ಟಿವಿಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗಿತ್ತು.