Untitled Document
Sign Up | Login    
Dynamic website and Portals
  
July 17, 2015

ರಾಜಕಾರಣದಲ್ಲಿ ಅಸ್ಪೃಶ್ಯತೆ ಇರಲೇಬಾರದು, ದೇಶಕ್ಕಾಗಿ ದುಡಿದವರನ್ನು ಗೌರವಿಸಬೇಕುಃ ಮೋದಿ

ಡೋಗ್ರಾ ಅವರ ಜೀವನದ ಫೋಟೋ ಪ್ರದರ್ಶನ ವೀಕ್ಷಿಸುತ್ತಿರುವ ಪ್ರಧಾನಿ ಮೋದಿ ಡೋಗ್ರಾ ಅವರ ಜೀವನದ ಫೋಟೋ ಪ್ರದರ್ಶನ ವೀಕ್ಷಿಸುತ್ತಿರುವ ಪ್ರಧಾನಿ ಮೋದಿ

ಜಮ್ಮು : ಜಮ್ಮು ಮತ್ತು ಕಾಶ್ಮೀರ ರಾಜ್ಯದ ಹಿರಿಯ ನಾಯಕ ದಿವಂಗತ ಗಿರಿಧಾರಿ ಲಾಲ್ ಡೋಗ್ರಾ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಜಮ್ಮುವಿಗೆ ಆಗಮಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ಮೋದಿ, ಡೋಗ್ರಾ ಅವರ ಜೀವನದ ಫೋಟೋ ಪ್ರದರ್ಶನ ವೀಕ್ಷಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡುತ್ತ ಪ್ರಧಾನಿ ಮೋದಿ, ರಾಜಕಾರಣದಲ್ಲಿ ಅಸ್ಪೃಶ್ಯತೆ ಇರಲೇಬಾರದು, ದೇಶಕ್ಕಾಗಿ ದುಡಿದವರನ್ನು ಗೌರವಿಸಬೇಕು ಎಂದರು. ಜನರ ಸಾಮರ್ಥ್ಯನ್ನು ನಿರ್ಣಯಿಸುವಲ್ಲಿ ಡೋಗ್ರಾ ಅವರು ಅತ್ಯಂತ ಸೂಕ್ಷ್ಮಮತಿಯಾಗಿದ್ದರು. ಅದಕ್ಕೆ ಅತ್ಯುತ್ತಮ ನಿದರ್ಶನ ಎಂದರೆ ಅವರು ಅಳಿಯನನ್ನು ಆಯ್ಕೆ ಮಾಡಿಕೊಂಡ ಬಗೆ ಎಂದು ಹೇಳಿದ ಮೋದಿ, ಡೋಗ್ರಾಜಿ ಮತ್ತು ಅರುಣ್ ಜೇಟ್ಲಿಜಿ ಅವರ ರಾಜಕೀಯ ಚಿಂತನೆಯಲ್ಲಿ ಯಾವುದೇ ಸಾಮ್ಯತೆಯೂ ಇರಲಿಲ್ಲ ಎಂದು ನುಡಿದರು. ಅರುಣ್ ಜೇಟ್ಲಿ ಅವರ ಪತ್ನಿ ಸಂಗೀತಾ ಜೇಟ್ಲಿ ಅವರು ದಿವಂಗತ ಜಿ.ಎಲ್. ಡೋಗ್ರಾ ಅವರ ಪುತ್ರಿ.

ಡೋಗ್ರಾ ಮತ್ತು ಜೇಟ್ಲಿ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಮಹತ್ವದ ಸಂಗತಿ ಏನೆಂದರೆ, ಅಳಿಯನಿಗೆ ಮಾವನ ಬಗ್ಗೆ ಗೊತ್ತಿಲ್ಲ, ಮಾವನಿಗೆ ಅಳಿಯನ ಬಗ್ಗೆ ಗೊತ್ತಿಲ್ಲ. ಆದರೆ ಕೆಲವು ಅಳಿಯಂದಿರ ಹಿಂದೆ ಅವರ ಸಂಬಂಧಿಕರ ನೆರಳು ಇರಲ್ಲ. ಅವರು ತಮ್ಮ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಹಾದಿಯನ್ನು ಕಂಡುಕೊಳ್ಳುತ್ತಾರೆ. ಆದರೆ ಇಂದು ನಮಗೆಲ್ಲರಿಗೂ ಗೊತ್ತಿರುವಂತೆ ರಾಜಕೀಯದಲ್ಲಿ ಅಳಿಯ (ಸೋನಿಯಾ, ವಾದ್ರಾ) ಹೇಗೆ ಇರುತ್ತಾನೆಂಬುದು ಜಗಜ್ಜಾಹೀರಾಗಿದೆ ಎಂದು ಪರೋಕ್ಷವಾಗಿ ಮೋದಿ ವಾಗ್ದಾಳಿ ನಡೆಸಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited