Untitled Document
Sign Up | Login    
Dynamic website and Portals
  
October 8, 2017

ಕಾಶ್ಮೀರದಲ್ಲಿ ಉದ್ರಿಕ್ತರನ್ನು, ಕಲ್ಲು ತೂರಾಟಗಾರರನ್ನು ನಿಯಂತ್ರಿಸಲು ಪ್ಲಾಸ್ಟಿಕ್ ಬುಲೆಟ್ ಗಳ ಬಳಕೆ

ಕಾಶ್ಮೀರದಲ್ಲಿ ಉದ್ರಿಕ್ತರನ್ನು, ಕಲ್ಲು ತೂರಾಟಗಾರರನ್ನು ನಿಯಂತ್ರಿಸಲು ಪ್ಲಾಸ್ಟಿಕ್ ಬುಲೆಟ್ ಗಳ ಬಳಕೆ

ಶ್ರೀನಗರ : ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಇನ್ಮುಂದೆ ಗಲಭೆಗಳನ್ನು ನಿಯಂತ್ರಿಸಲು ಪೆಲ್ಲೆಟ್ ಗನ್ ಗಳ ಬದಲಾಗಿ ಪ್ಲಾಸ್ಟಿಕ್ ಬುಲೆಟ್ ಗಳನ್ನು ಬಳಸಲು ನಿರ್ಧರಿಸಲಾಗಿದ್ದು, ಈ ನಿಟ್ಟಿನಲ್ಲಿ ಸಿಆರ್ ಪಿಎಫ್ ಹೊಸದಾಗಿ ಅಭಿವೃದ್ಧಿಗೊಳಿಸಿದ 21 ಸಾವಿರ ಸುತ್ತುಗಳ ಪ್ಲಾಸ್ಟಿಕ್‌ ಬುಲೆಟ್‌ಗಳನ್ನು ಜಮ್ಮು-ಕಾಶ್ಮೀರಕ್ಕೆ ಕಳುಹಿಸಿದೆ.

ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಈ ಬುಲೆಟ್‌ಗಳನ್ನು ಪುಣೆಯಲ್ಲಿನ ಆರ್ಡಿನನ್ಸ್‌ ಫ್ಯಾಕ್ಟರಿಯಲ್ಲಿ ಉತ್ಪಾದಿಸಲಾಗಿದೆ. ಇದನ್ನು ಎಕೆ 56 ಹಾಗೂ 47 ಸರಣಿಯ ಗನ್‌ಗಳಲ್ಲಿ ಬಳಸಬಹುದಾಗಿದೆ. ಈ ಬುಲೆಟ್‌ಗಳು ಪೆಲೆಟ್‌ಗಳಿಗಿಂತ ಕಡಿಮೆ ಅಪಾಯಕಾರಿ ಎಂದು ಪರೀಕ್ಷೆಯಲ್ಲಿ ತಿಳಿದುಬಂದಿದೆ.

ಜಮ್ಮು ಕಾಶ್ಮೀರದಲ್ಲಿ ಉದ್ರಿಕ್ತರನ್ನು ಚದುರಿಸಲು ಹಾಗೂ ಕಲ್ಲು ತೂರಾಟಗಾರರನ್ನು ನಿಯಂತ್ರಿಸಲು ಈವರೆಗೆ ಪೆಲೆಟ್ ಗನ್ ಗಳನ್ನು ಬಳಸಲಾಗುತಿತ್ತು. ಆದರೆ ಪೆಲೆಟ್‌ಗಳಿಂದಾಗಿ ಅಮಾಯಕರು ಕಣ್ಣು ಕಳೆದುಕೊಂಡಿರುವ ಘಟನೆಗಳು ವರದಿಯಾಗಿತ್ತು. ಹೀಗಾಗಿ ಪರ್ಯಾಯ ವಿಧಾನಗಳಾದ ಪ್ಲಾಸ್ಟಿಕ್‌ ಬುಲೆಟ್‌ಗಳು ಮತ್ತು ಮೆಣಸಿನ ಪುಡಿ ಆಧರಿತ ಪಾವಾ ಶೆಲ್‌ಗ‌ಳನ್ನು ಬಳಸಲು ಕೇಂದ್ರ ಸರ್ಕಾರ ಸೂಚಿಸಿತ್ತು.

 

 

Share this page : 
 

Table 'bangalorewaves.bv_news_comments' doesn't exist