Untitled Document
Sign Up | Login    
Dynamic website and Portals
  
June 26, 2015

ಲಂಡನ್ ನಲ್ಲಿ ರಾಬರ್ಟ್ ವಾದ್ರಾ, ಪ್ರಿಯಾಂಕಾ ಭೇಟಿಯಾಗಿದ್ದೆ: ಲಲಿತ್ ಹೊಸ ಬಾಂಬ್

ನವದೆಹಲಿ : ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ವಿವಾದಕ್ಕೆ ಇದೀಗ ಮತ್ತೊಂದು ನಾಟಕೀಯ ತಿರುವು ಸಿಕ್ಕಿದ್ದು, ಕಳೆದ ವರ್ಷ ಲಂಡನ್ ನಲ್ಲಿ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಹಾಗೂ ಮಗಳು ಪ್ರಿಯಾಂಕಾ ಗಾಂಧಿಯನ್ನು ಭೇಟಿಯಾಗಿರುವುದಾಗಿ ಲಲಿತ್ ಮೋದಿ ಟ್ವೀಟ್ ಮಾಡುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

ಲಲಿತ್ ಮೋದಿ ವಿವಾದದಲ್ಲಿ ಆಡಳಿತಾರೂಢ ಎನ್.ಡಿ.ಎ ಸರ್ಕಾರವನ್ನು ಪ್ರತಿಪಕ್ಷ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿಸುತ್ತಿರುವ ನಡುವೆಯೇ ಲಲಿತ್ ಮೋದಿ ಹೊಸ ಮಾಹಿತಿಯನ್ನು ಸ್ಫೋಟಿಸಿದ್ದಾರೆ.

ಲಂಡನ್ ನಲ್ಲಿ ಗಾಂಧಿ ಕುಟುಂಬವನ್ನು ಭೇಟಿಯಾಗಿದ್ದು ಖುಷಿ ಕೊಟ್ಟಿತ್ತು. ಪ್ರಿಯಾಂಕಾ ಮತ್ತು ರಾಬರ್ಟ್ ವಾದ್ರಾ ಅವರನ್ನು ನಾನು ರೆಸ್ಟೋರೆಂಟ್ ನಲ್ಲಿ ಪ್ರತ್ಯೇಕವಾಗಿಯೇ ಭೇಟಿಯಾಗಿದ್ದೆ.ಪ್ರಿಯಾಂಕಾ, ವಾದ್ರಾ ಬಳಿ ನನ್ನ ಫೋನ್ ನಂಬರ್ ಇದೆ. ಅವರು ಆಗಾಗ ನನಗೆ ಕರೆ ಮಾಡುತ್ತಿರುತ್ತಾರೆ ಎಂದು ಹೇಳಿದ್ದಾರೆ.

ಅವರನ್ನು ಲಂಡನ್ ನಲ್ಲಿ ಭೇಟಿಯಾಗಿದ್ದು ಒಂದು ಅಪೂರ್ವ ಘಟನೆ, ಅದು ಆಕಸ್ಮಿಕ ಭೇಟಿಯಾಗಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ಅವರು ನನ್ನ ಭೇಟಿಯಾಗಿದ್ದರು ಎಂದು ಲಲಿತ್ ಮೋದಿ ಸರಣಿ ಟ್ವೀಟ್ ಮಾಡಿದ್ದಾರೆ.

ಲಂಡನ್ ನ ರೆಸ್ಟೋರೆಂಟ್ ನಲ್ಲಿ ಪ್ರಿಯಾಂಕಾ ಗಾಂಧಿ, ರಾಬರ್ಟ್ ವಾದ್ರಾ ಅವರನ್ನು ಭೇಟಿಯಾಗಿದ್ದೆ ಎಂದು ಲಲಿತ್ ಮೋದಿ ಟ್ವೀಟ್ ಮಾಡಿರುವುದು ಇದೀಗ ಕಾಂಗ್ರೆಸ್ ನಲ್ಲೂ ಸಂಚಲನ ಮೂಡಿಸಿದ್ದು, ಪ್ರಿಯಾಂಕಾ ಮತ್ತು ವಾದ್ರಾ ಅವರನ್ನು ಲಲಿತ್ ಮೋದಿ ಆಕಸ್ಮಿಕ ಭೇಟಿಯಾಗಿತ್ತೇ ವಿನಃ, ಅದು ಪೂರ್ವ ನಿಯೋಜಿತ ಅಲ್ಲ. ಅಲ್ಲದೇ ರೆಸ್ಟೋರೆಂಟ್ ನಲ್ಲಿ ಭೇಟಿಯಾಗುವುದು ಅಪರಾಧ ಅಲ್ಲ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ತಿರುಗೇಟು ನೀಡಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited