Untitled Document
Sign Up | Login    
Dynamic website and Portals
  
June 2, 2015

ಗ್ರಾಮ ಪಂಚಾಯ್ತಿ ಚುನಾವಣೆ: 2ನೇ ಹಂತದ ಮತದಾನ ಆರಂಭ

ಬೆಂಗಳೂರು : ಗ್ರಾಮ ಪಂಚಾಯ್ತಿ ಚುನಾವಣೆಯ ಎರಡನೇ ಹಂತದ ಮತದಾನ ಬೆಳಗ್ಗೆ 7ರಿಂದ ಆರಂಭವಾಗಿದ್ದು, ಸಂಜೆ 5 ಗಂಟೆಯ ವರೆಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮತದಾರರ ಎಡಗೈ ಹೆಬ್ಬೆರಳಿಗೆ ಅಳಿಸಲಾಗದ ಶಾಯಿ ಗುರುತು ಹಾಕಲಾಗುತ್ತದೆ.

ಪಂಚಾಯ್ತಿ ಚುನಾವಣೆಗಳಲ್ಲಿ ಮತದಾನ ಕಡ್ಡಾಯಗೊಳಿಸಿದ ಬಳಿಕ ನಡೆಯುತ್ತಿರುವ ಪ್ರಥಮ ಗ್ರಾಮ ಪಂಚಾಯ್ತಿ ಚುನಾವಣೆ ಇದಾಗಿದೆ. ಮೊದಲ ಹಂತದ ಚುನಾವಣೆಯಲ್ಲಿ ಕಡ್ಡಾಯ ಮತದಾನ ನಿಯಮ ಯಾವುದೇ ಪರಿಣಾಮ ಬೀರಿರಲಿಲ್ಲ. ಹೀಗಾಗಿ ಎರಡನೇ ಹಂತದಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಮೇ 29ರಂದು ಮೊದಲ ಹಂತದ ಮತದಾನ ನಡೆದಿದ್ದು ಶೇ 80ರಷ್ಟು ಮತ ಚಲಾವಣೆಯಾಗಿತ್ತು.

15 ಜಿಲ್ಲೆಗಳಲ್ಲಿ ಮತದಾನ ಆರಂಭವಾಗಿದ್ದು, ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನಲ್ಲಿರುವ ತ್ಯಾಗದಳ ಗ್ರಾಮದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಮತದಾರರಿಲ್ಲ ಎಂದು ಮೀಸಲಾತಿ ಹಿನ್ನಲೆಯಲ್ಲಿ ಚುನಾವಣೆ ಬಹಿಷ್ಕರಿಸಲಾಗಿದೆ.

ನಗರ ಜಿಲ್ಲೆಯ 93 ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಜಿಲ್ಲಾಡಳಿತ ಸಿದ್ಧವಾಗಿದ್ದು, ಇದರಲ್ಲಿ 882 ಕ್ಷೇತ್ರಗಳಲ್ಲಿ 790 ಕ್ಷೇತ್ರಗಳ 2,011 ಸ್ಥಾನಗಳಿಗೆ 5,464 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. 93 ಗ್ರಾಮ ಪಂಚಾಯಿತಿಗಳಲ್ಲಿ 882 ಕ್ಷೇತ್ರಗಳಿದ್ದು, 2,373 ಸ್ಥಾನಗಳಲ್ಲಿ 358 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚಿಕ್ಕಬಿದರಕಲ್ಲು ಗ್ರಾಮ ಪಂಚಾಯ್ತಿಯ 8 ಕ್ಷೇತ್ರಗಳ ಎಲ್ಲ 29 ಸ್ಥಾನಗಳಿಗೆ ಅವಿರೋಧವಾಗಿ ಅಭ್ಯರ್ಥಿಗಳು ಆಯ್ಕೆಯಾಗಿರುವುದರಿಂದ ಮತದಾನ ನಡೆಯುತ್ತಿಲ್ಲ.

ಆನೇಕಲ್ ತಾಲೂಕಿನ ಗುಡ್ಡನಹಳ್ಳಿ ಹಾಗೂ ಭೂತಾನಹಳ್ಳಿಯಲ್ಲಿ ಎಲ್ಲ ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದಾರೆ. ಹಾಗೂ ವಿವಿದ ಕಾರಣಗಳಿಗೆ ಒಟ್ಟು 92 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿಲ್ಲ. ಉತ್ತರ ತಾಲೂಕಿನಲ್ಲಿ 119 ಕ್ಷೇತ್ರಗಳ 330 ಸ್ಥಾನ, ಉತ್ತರ ಅಪರ ತಾಲೂಕಿನಲ್ಲಿ 136 ಕ್ಷೇತ್ರಗಳ 334 ಸ್ಥಾನ, ದಕ್ಷಿಣ ತಾಲೂಕಿನಲ್ಲಿ 164 ಕ್ಷೇತ್ರಗಳ 435 ಸ್ಥಾನ, ಪೂರ್ವ ತಾಲೂಕಿನ 91 ಕ್ಷೇತ್ರಗಳ 234 ಸ್ಥಾನ ಹಾಗೂ ಆನೇಕಲ್ ತಾಲೂಕಿನ 280 ಕ್ಷೇತ್ರಗಳ 678 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಐದು ತಾಲೂಕಿನಲ್ಲಿ 912 ಮತಗಟ್ಟೆಗಳಿದ್ದು, 306 ಸೂಕ್ಷ್ಮ ಹಾಗೂ 202 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಜಿಲ್ಲೆಯಲ್ಲಿ 3,82,877 ಪುರುಷ ಮತದಾರರು, 3,53,527 ಮಹಿಳಾ ಮತದಾರರು ಹಾಗೂ ಮೂವರು ಇತರೆ ಮತದಾರರು ಸೇರಿದಂತೆ ಒಟ್ಟು 7,36,407 ಮತದಾರರಿದ್ದಾರೆ.

ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಒಂದು ಪೊಲೀಸ್ ಕಮಿಷನರೇಟ್ ವ್ಯಾಪ್ತಿ ಹಾಗೂ 15 ಜಿಲ್ಲೆಗಳ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮತದಾನ ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಸೂಕ್ಷ್ಮ, ಅತಿ ಸೂಕ್ಷ್ಮ ಹಾಗೂ ಸಾಮಾನ್ಯ ಮಗಟ್ಟೆಗಳಲ್ಲೂ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ತಿಳಿಸಿದ್ದಾರೆ.

2ನೇ ಹಂತದಲ್ಲಿ 3294 ಅತಿ ಸೂಕ್ಷ್ಮ, 4607 ಸೂಕ್ಷ್ಮ ಹಾಗೂ 11,18 ಸಾಮÁನ್ಯ ಮತಗಟ್ಟೆಗಳಿದ್ದು ಅವುಗಳಿಗೆ ಒಟ್ಟು 20,109 ಸಿಬ್ಬಂದಿ ನಿಯೋಜಿಸಲಾಗಿದೆಲಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited