Untitled Document
Sign Up | Login    
Dynamic website and Portals
  
June 1, 2015

ಕಾಣೆಯಾದ ಮಕ್ಕಳ ಪತ್ತೆಗಾಗಿ ಕೇಂದ್ರ ಸರ್ಕಾರದಿಂದ ವೆಬ್‌ ಸೈಟ್‌ ಜಾರಿ

ನವದೆಹಲಿ : ಕಾಣೆಯಾದ ಮಕ್ಕಳ ಪತ್ತೆಗೆ, ಸಿಕ್ಕಿದ ಮಕ್ಕಳನ್ನು ಅವರ ಹೆತ್ತವರೊಂದಿಗೆ ಸೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಜೂ.2ರಿಂದ ವೆಬ್‌ ಸೈಟ್‌ ವೊಂದನ್ನು ಆರಂಭಿಸಲಿದೆ.

ದೇಶದಲ್ಲಿ ಪ್ರತಿ ಗಂಟೆಗೊಮ್ಮೆ 11 ಮಕ್ಕಳು ಕಾಣೆಯಾಗುತ್ತಿದ್ದು ಅಂಥ ಮಕ್ಕಳ ಬಗ್ಗೆ ಸುದ್ದಿಯನ್ನು ಪ್ರಕಟಿಸಲು, ಕಾಣೆಯಾದ ಮಕ್ಕಳ ಬಗ್ಗೆ ಮಾಹಿತಿ ನೀಡುವ ಮತ್ತು ಅವರ ಪತ್ತೆಗೆ ನೆರವಾಗುವುದಕ್ಕೆ ಈ ವೆಬ್‌ ಸೈಟ್‌ ವೇದಿಕೆಯಾಗಲಿದೆ.

www.khoyapaya.gov.in ವೆಬ್‌ ಸೈಟ್‌ ಅನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಮಾಹಿತಿ ತಂತ್ರಜ್ಞಾನ ಇಲಾಖೆಯ ಸಹಯೋಗದೊಂದಿಗೆ ಮೊದಲ ಬಾರಿಗೆ ಸಿದ್ಧ ಪಡಿಸಲಾಗಿದೆ.

ಈ ವೆಬ್‌ ಸೈಟ್‌ ನಲ್ಲಿ 3 ವಿಭಾಗಗಳಿವೆ. ’ನನ್ನ ಮಗು ಕಾಣೆಯಾಗಿದೆ'. ”ನಾನು ಒಂದು ಮಗುವನ್ನು ನೋಡಿದ್ದೇನೆ' ಮತ್ತು ’ಕಾಣೆಯಾದ ಮಗುವನ್ನು ಹುಡುಕಿ' ಎಂಬ ವಿಭಾಗಗಳನ್ನು ಹೊಂದಿದೆ.

ಅಲ್ಲದೆ, ಮಗುವೊಂದು ಕಾಣೆಯಾಗಿರುವುದು ಗೊತ್ತಾದ ಬಳಿಕ ಪೊಲೀಸರು ಎಫ್.ಐ.ಆರ್‌ ದಾಖಲಿಸಿಕೊಳ್ಳುವುದು ಕಡ್ಡಾಯವಾಗಿದೆ. ಈ ಕುರಿತ ಕೋರ್ಟ್‌ ಆದೇಶಗಳಿಗೆ ಸಂಬಂಧಿಸಿದ ಲಿಂಕ್‌ ಗಳನ್ನು ವೆಬ್‌ ಸೈಟ್‌ ನಲ್ಲಿ ನೀಡಲಾಗಿದೆ. ಅಲ್ಲದೆ, ಇಷ್ಟುದಿನ ವ್ಯಕ್ತಿಯೊಬ್ಬ ಮಗುವನ್ನು ಕಳೆದುಕೊಂಡರೆ ಮುಂದೇನು ಮಾಡಬೇಕು ಎಂಬ ಬಗ್ಗೆ ಮಾಹಿತಿಯ ಕೊರತೆ ಇತ್ತು. ಹೆಚ್ಚಿನ ಸಂದರ್ಭದಲ್ಲಿ ಪೊಲೀಸರೇ ಮಗುವಿನ ಪತ್ತೆಯಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸುತ್ತಿದ್ದರು. ಹೀಗಾಗಿ ಪೊಲೀಸರಿಂದ ಹೆಚ್ಚಿನ ಸಹಾಯವನ್ನು ಪಡೆದುಕೊಳ್ಳುವಲ್ಲಿಯೂ ಈ ವೆಬ್‌ ಸೈಟ್‌ ನೆರವಾಗಲಿದೆ.

ಅಲಯನ್ಸ್‌ ಆಫ್ ಪೀಪಲ್ಸ್‌ ರೈಟ್ಸ್‌ ಎಂಬ ಎನ್‌.ಜಿ.ಒದ ವರದಿಯ ಪ್ರಕಾರ ದೆಹಲಿಯಲ್ಲಿ ಪ್ರತಿದಿನ 18 ಮಕ್ಕಳು ಕಾಣೆಯಾಗುತ್ತಿದ್ದು, ಅವರಲ್ಲಿ 4 ಮಕ್ಕಳನ್ನು ಹುಡುಕುವುದು ಪೊಲೀಸರಿಗೆ ಸಾಧ್ಯವಾಗುತ್ತಿಲ್ಲ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited