Untitled Document
Sign Up | Login    
Dynamic website and Portals
  
May 24, 2015

ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಬಿಸಿಲಿಗೆ 225 ಜನರ ಸಾವು

ನವದೆಹಲಿ/ತೆಲಂಗಾಣ : ದೇಶಕ್ಕೆ ಮುಂಗಾರು ಆಗಮಿಸಲು ದಿನಗಣನೆ ಆರಂಭವಾಗಿರುವಂತೆಯೇ ಹಲವು ರಾಜ್ಯಗಳಲ್ಲಿ ಉಷ್ಣಾಂಶ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣವೊಂದರಲ್ಲೇ ಕಳೆದ ಮೂರು ದಿನಗಳಲ್ಲಿ ಬಿಸಿ ಗಾಳಿಯಿಂದಾಗಿ ಬರೋಬ್ಬರಿ 225 ಜನರು ಸಾವನ್ನಪ್ಪಿದ್ದಾರೆ.

ಈ ಎರಡೂ ರಾಜ್ಯಗಳಲ್ಲಿ ತಾಪಮಾನ 47 ಡಿಗ್ರಿ ಸೆಲ್ಸಿಯಸ್‌ ಗೆ ತಲುಪಿದ್ದು, ಒಂದೇ ದಿನ 100 ಮಂದಿ ಸಾವನ್ನಪ್ಪಿದ್ದಾರೆ. 2002ರ ಮೇ 11ರಂದು ವಿಜಯವಾಡದಲ್ಲಿ 48.8 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು. ಈ ಬಾರಿಯ ತಾಪಮಾನ ಆ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಸರ್ಕಾರಗಳು ಸಭೆ ನಡೆಸಿ, ಪರಿಸ್ಥಿತಿ ಪರಾಮರ್ಶೆ ನಡೆಸಿವೆ. ಹಗಲಿನ ಹೊತ್ತು ಯಾವುದೇ ಸುರಕ್ಷತೆ ಇಲ್ಲದೆ ಮನೆಯಿಂದ ಹೊರಗೆ ಬರಬಾರದು ಎಂದು ನಾಗರಿಕರಿಗೆ ಸೂಚನೆ ನೀಡಿವೆ.

ಈ ನಡುವೆ, ಒಡಿಶಾದಲ್ಲೂ ಉಷ್ಣ ಗಾಳಿಯ ಪ್ರತಾಪ ಹೆಚ್ಚಾಗಿದ್ದು, ಈವರೆಗೆ 23 ಮಂದಿ ಸಾವನ್ನಪ್ಪಿದ್ದಾರೆ. ಹಗಲಿನ ವೇಳೆ ಜನಸಂಚಾರ ವಿರಳವಾಗಿದೆ. ಪಶ್ಚಿಮ ಬಂಗಾಳದಲ್ಲಿ ಬಿಸಿಲಿನ ಕಾರಣಕ್ಕೆ ಓರ್ವ ಬಲಿಯಾಗಿದ್ದಾನೆ. ಪಂಜಾಬ್‌, ಹರ್ಯಾಣದಲ್ಲೂ ಉಷ್ಣಾಂಶದಿಂದಾಗಿ ಜನರು ಬವಣೆ ಪಡುವಂತಾಗಿದೆ.

 

 

Share this page : 
 

More News From : Agriculture & Environment

ವರುಣನ ಆರ್ಭಟಕ್ಕೆ ತತ್ತರಿಸಿದ ಜನತೆ;ಏಳು ಜನರು ಸಾವು ಇನ್ನೂ ಎರಡುದಿನ ಕಾಲ ಭಾರೀ ಮಳೆ ಎಚ್ಚರಿಕೆ
 • ವರುಣನ ಆರ್ಭಟಕ್ಕೆ ತತ್ತರಿಸಿದ ಜನತೆ;ಏಳು ಜನರು ಸಾವು ಇನ್ನೂ ಎರಡುದಿನ ಕಾಲ ಭಾರೀ ಮಳೆ ಎಚ್ಚರಿಕೆ
 • ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸುರಿದ ಭಾರಿ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಅಮಳೆ ಅವಾಂತರಗಳಿಂದ ಸಂಭವಿಸಿದ ಅನಾಹುತಗಳಲ್ಲಿ ಏಳು ಜನರು ನೀರುಪಾಲಾಗಿದ್ದಾರೆ.
 • ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಬಿಹಾರ, ಒಡಿಶಾದಲ್ಲಿ ಚಂಡಮಾರುತ
 • ವರುಣನ ಅರ್ಭಟಕ್ಕೆ 8 ಜನರು ಬಲಿ: ಮೃತರ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ಪರಿಹಾರ
 • The Ultimate Job Portal
  Netzume - Resume Website Gou Products

  Other News

  Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
  © bangalorewaves. All rights reserved. Developed And Managed by Rishi Systems P. Limited