Untitled Document
Sign Up | Login    
Dynamic website and Portals
  
October 6, 2017

ವರುಣನ ಅರ್ಭಟಕ್ಕೆ 8 ಜನರು ಬಲಿ: ಮೃತರ ಕುಟುಂಬಕ್ಕೆ ಸರ್ಕಾರದಿಂದ 5 ಲಕ್ಷ ಪರಿಹಾರ

ವರುಣನ ಆರ್ಭಟಕ್ಕೆ ಬೆಂಗಳೂರು ನಗರದ ಹಲವು ಭಾಗ ಜಲಾವೃತ.. ವರುಣನ ಆರ್ಭಟಕ್ಕೆ ಬೆಂಗಳೂರು ನಗರದ ಹಲವು ಭಾಗ ಜಲಾವೃತ..

ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸುರಿದ ಕುಂಭದ್ರೋಣ ಮಳೆಗೆ ಎಂಟು ಜನರು ಬಲಿಯಾಗಿದ್ದಾರೆ. ವರುಣನ ಆರಭ್ಹಟಕ್ಕೆ ಸಂಭವಿಸಿದ ವಿವಿಧ ಅವಘಡಗಳಲ್ಲಿ ಹಾಗೂ ಸಿಡಿಲು ಬಡಿದು ಒಟ್ಟು 8 ಮಂದಿ ಸಾವಿಗೀಡಾಗಿದ್ದರೆ ನಾಲ್ವರೂ ಗಂಭೀರ ಗಾಯಗೊಂಡಿದ್ದಾರೆ.

ಇನ್ನೂ ಎರಡು-ಮೂರು ದಿನಗಳ ಕಾಲ ಇದೇ ರೀತಿಯಲ್ಲೇ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಪಿರಿಯಾಪಟ್ಟಣ ತಾಲೂಕು ಕಸಬಾ ಹೋಬಳಿಗೆ ಸೇರಿದ ಹುಣಸವಾಡಿ ಗ್ರಾಮದಲ್ಲಿ ಸಿಡಿಲು ಬಡಿದು ಆರು ಮಂದಿ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗ್ರಾಮದ ತಿಮ್ಮೇಗೌಡ(70), ಪುಟ್ಟೇಗೌಡ (60), ಸುವರ್ಣಮ್ಮ(50), ಸುದೀಪ್‌ (17), ಸುಜಯ್‌ (18) ಮತ್ತು ಉಮೇಶ್‌(23) ಮೃತಪಟ್ಟ ದುರ್ದೈವಿಗಳು. ಇದೇ ಗ್ರಾಮದ ಗಣೇಶ, ವಿಜಯ್‌ ಮತ್ತು ಮಾದೇಶ್‌ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು, ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ದುಮ್ಮಿಕೊಪ್ಪಲು ಗ್ರಾಮದ ರಾಜೇಗೌಡ (55) ಎಂಬುವರು ತಮ್ಮ ಜಮೀನಿನ ಬಳಿ ಹೋಗಿದ್ದಾಗ ಸಿಡಿಲು ಬಡಿದು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಅದೃಷ್ಟವಶಾತ್‌ ಸಮೀಪದಲ್ಲೇ ಇದ್ದ ಅವರ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಮಧ್ಯೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಜಟ್ಟೂರಿನಲ್ಲಿ ಮೈಸಪ್ಪ ಅನಂತಪ್ಪ ಮಾದರ(28) ಎಂಬ ರೈತ ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.

ಮೃತಪಟ್ಟವರ ಕುಟುಂಬಗಳಿಗೆ ರಾಜ್ಯ ಸರ್ಕಾರ 5 ಲಕ್ಷ ಪರಿಹಾರ ಘೋಷಿಸಿದೆ. ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ ತಲಾ 4 ಲಕ್ಷ ರೂ. ಹಾಗೂ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ತಲಾ 1 ಲಕ್ಷ ರೂ. ಪರಿಹಾರ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲಾಧಿಕಾರಿ ರಂದೀಪ್‌ ಅವರಿಗೆ ಸೂಚಿಸಿದ್ದಾರೆ.

 

 

Share this page : 
 

Table 'bangalorewaves.bv_news_comments' doesn't exist