ಪಾಟ್ನಾ : ಕೋಮು ಸಾಮರಸ್ಯಕ್ಕೆ ಸಾಕ್ಷಿ ಎಂಬಂತೆ ಬಿಹಾರದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಬೃಹತ್ ಹಿಂದೂ ದೇಗುಲದ ನಿರ್ಮಾಣಕ್ಕೆ ಮುಸ್ಲಿಮರು ಭೂಮಿಯನ್ನು ದಾನವಾಗಿ ನೀಡಿದ್ದಾರೆ.
ಬಿಹಾರದ ಪೂರ್ವ ಚಂಪಾರನ್ ಜಿಲ್ಲೆಯ ಜಾನಕಿ ನಗರ್ ಎಂಬಲ್ಲಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಬೃಹತ್ ದೇಗುಲವನ್ನು ನಿರ್ಮಾಣ ಮಾಡಲಾಗುತ್ತಿದೆ. ವಿಶೇಷವೆಂದರೆ ದೇಗುಲದಲ್ಲಿ ಏಕಕಾಲಕ್ಕೆ 20000 ಮಂದಿ ಕುಳಿತುಕೊಳ್ಳಬಹುದಾಗಿದೆ.
ದೇಗುಲ ನಿರ್ಮಾಣಕ್ಕಾಗಿ ಮುಸ್ಲಿಮರು ಭೂಮಿಯನ್ನು ದಾನವಾಗಿ ನೀಡಿದ್ದು ಮಾತ್ರವಲ್ಲದೆ ,ಕಡಿಮೆ ಬೆಲೆಗೆ ಹೆಚ್ಚಿನ ಭೂಮಿಯನ್ನು ಮಾರಾಟ ಮಾಡಿ ಸಾಮರಸ್ಯ ಮೆರೆದು ಮಾದರಿಯಾಗಿದ್ದಾರೆ.
ದೇಗುಲ ನೇಪಾಲದ ಗಡಿ ಭಾಗದಲ್ಲಿ ನಿರ್ಮಾಣವಾಗುತ್ತಿರುವ ಕಾರಣ ಭೂಕಂಪ ನಿರೋಧಕ ವ್ಯವಸ್ಥೆಯನ್ನು ಬಳಸಿ ನಿರ್ಮಾಣ ಮಾಡಲಾಗುತ್ತಿದೆ.