ಸಿಯೋಲ್ : ಭಾರತ ಮತ್ತು ದಕ್ಷಿಣ ಕೊರಿಯಾ ನಡುವೆ 7 ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಭಾರತದ ಅಭಿವೃದ್ಧಿಯಲ್ಲಿ ಕೊರಿಯಾ ಪಾತ್ರ ಮಹತ್ವದ್ದು . ಕೊರಿಯಾ ಅಭಿವೃದ್ದಿಯಿಂದ ಪ್ರಭಾವಿತನಾಗಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ದಕ್ಷಿಣ ಕೊರಿಯಾದ ಅಧ್ಯಕ್ಷ ಪಾರ್ಕ್ ಗೆಯುನ್ ಹೈ ಅವರನ್ನು ಭೇಟಿ ಮಾಡಿ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ ನಂತರ ಹೆದ್ದಾರಿ, ವಿದ್ಯುತ್, ಸಾರಿಗೆ, ದ್ವಿಮುಖ ತೆರಿಗೆ ಪದ್ಧತಿ ರದ್ದು, ಸರಕು ಸಾಗಣೆ ಸೇರಿದಂತೆ ಹಲವು ಉದ್ದೇಶಿತ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಬಲವಾದ ಆರ್ಥಿಕ ಪ್ರಾಶಸ್ತ್ಯದ ಮೂಲಕ ನಮ್ಮ ಸಂಬಂಧ ಆರಂಭವಾಗಿದೆ. ಆದರೆ ಈಗ ಏಷ್ಯಾ ರಾಷ್ಟ್ರಗಳಿಗೆ ಕೊರಿಯಾ ಅಭಿವೃದ್ಧಿ ಮಹತ್ವದ್ದಾಗಿದ್ದು, ಆ ನಿಟ್ಟಿನಲ್ಲಿ ಭಾರತಕ್ಕೂ ಸಹ ಅದು ಮುಖ್ಯವಾಗಲಿದೆ ಮೋದಿ ಎಂದು ತಿಳಿಸಿದರು.
ನಮ್ಮ ಹೊಸ ಬಗೆಯ ಸಂಬಂಧದಿಂದ ಭಾರತ ಮತ್ತು ದಕ್ಷಣ ಕೊರಿಯಾ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಉನ್ನತೀಕರಣಗೊಳ್ಳಲಿದೆ. ಭಾರತದ ಆರ್ಥಿಕ ಆಧುನಿಕರಣಕ್ಕೆ ದಕ್ಷಿಣ ಕೊರಿಯಾ ನಮ್ಮ ಮಹತ್ವದ ಪಾರ್ಟನರ್ ಎಂದು ಪರಿಗಣಿಸುವುದಾಗಿ ಮೋದಿ ಈ ಸಂದರ್ಭದಲ್ಲಿ ಹೇಳಿದರು.