Untitled Document
Sign Up | Login    
Dynamic website and Portals
  
May 18, 2015

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

ಬೆಂಗಳೂರು : 2015ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದಲ್ಲಿಯೇ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ.

ಉಡುಪಿ ಜಿಲ್ಲೆ ದ್ವಿತೀಯ, ಉತ್ತರ ಕನ್ನಡ ತೃತೀಯ ಹಾಗೂ ಗದಗ ಕೊನೆಯ ಸ್ಥಾನ ಪಡೆದುಕೊಂಡಿದೆ. ದಕ್ಷಿಣ ಕನ್ನಡ ಶೇ.93.09ರಷ್ಟು, ಉಡುಪಿ ಶೇ. 92.32, ಉತ್ತರ ಕನ್ನಡ ಶೇ. 81.19ರಷ್ಟು, ಗದಗ ಶೇ. 51.02ರಷ್ಟು ಫಲಿತಾಂಶ ಪಡೆದಿದೆ.

ಮಲ್ಲೇಶ್ವರಂನಲ್ಲಿರುವ ಕಚೇರಿಯಲ್ಲಿ ಪಿಯು ಬೋರ್ಡ್ ನಿರ್ದೇಶಕಿ ಸುಷ್ಮಾ ಗೋಡಬೋಲೆ ಸುದ್ದಿಗೋಷ್ಠಿಯಲ್ಲಿ ಪಿಯುಸಿ ಫಲಿತಾಂಶದ ಮಾಹಿತಿ ನೀಡಿದರು.

ಎಂದಿನಂತೆ ಈ ಬಾರಿಯೂ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ. ರಾಜ್ಯದಲ್ಲಿ ಶೇ.60.54ರಷ್ಟು ದ್ವಿತೀಯ ಪಿಯು ಫಲಿತಾಂಶ ಬಂದಿದೆ. ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳದ್ದೇ ಮೇಲುಗೈ. ಈ ಬಾರಿ ಶೇ.69.24ರಷ್ಟು ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದಾರೆ. ಶೇ.53.09ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷವೇ ಹೆಚ್ಚು ಶೂನ್ಯ ಫಲಿತಾಂಶ ಪಡೆದಿದೆ. ಪ್ರಸಕ್ತ ಸಾಲಿನಲ್ಲಿ 55 ಕಾಲೇಜು ನೂರಕ್ಕೆ ನೂರು ಫಲಿತಾಂಶ ಪಡೆದಿದೆ.

ಮಾರ್ಚ್‌ 12 ರಿಂದ 28ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 6.10 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ರಾಜ್ಯದ 1,017 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಪರೀಕ್ಷೆಯಲ್ಲಿ 4.96 ಲಕ್ಷ ಹೊಸ ವಿದ್ಯಾರ್ಥಿಗಳು, 82 ಸಾವಿರ ಪುನರಾವರ್ತಿತ ಹಾಗೂ 31 ಸಾವಿರ ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.

ಈ ಬಾರಿಯು ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ ಪಡೆದುಕೊಂಡಿದ್ದು, ಗದಗ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ.

ಜಿಲ್ಲೆ ಪ್ರತಿಶತ ಸ್ಥಾನ ಈ ಕೆಳಗಿನಂತಿದೆ

ದಕ್ಷಿಣ ಕನ್ನಡ 93.09 1
ಉಡುಪಿ 92.32 2
ಉತ್ತರ ಕನ್ನಡ. 81.19 3
ಕೊಡಗು 79.84 4
ಚಿಕ್ಕಮಗಳೂರು. 75.18 5
ಶಿವಮೊಗ್ಗ 74.41 6
ಬೆಂಗಳೂರುದಕ್ಷಿಣ 73.04 7
ಬೆಂಗಳೂರುಉತ್ತರ 72.80 8
ಚಾಮರಾಜನಗರ 72.16 9
ಹಾವೇರಿ 71.58 10
ಬಾಗಲಕೋಟೆ. 70.40 11
ಬೆಂಗಳೂರುಗ್ರಾ. 69.40 12
ಚಿಕ್ಕಬಳ್ಳಾಪೂರ. 68.44 13
ಧಾರವಾಡ. 67.25 14
ಹಾಸನ. 66.64 15
ಮೈಸೂರು 65.73 16
ಬೆಳಗಾವಿ. 64.87 17
ಕೋಲಾರ 63.68 18
ರಾಮನಗರ 63.60 19
ಬಳ್ಳಾರಿ 63.48 20
ದಾವಣಗೆರೆ. 62.71 21
ಯಾದಗಿರಿ. 62.09 22
ಕಲಬುರಗಿ 61.06 23
ತುಮಕೂರು. 61.02 24
ವಿಜಯಪುರ 60.65 25
ಮಂಡ್ಯ. 58.57 26
ಕೊಪ್ಪಳ. 58.35 27
ಚಿತ್ರದುರ್ಗ. 56.67 28
ರಾಯಚೂರು. 54.88 29
ಬೀದರ್ 54.40 30
ಗದಗ 51.02 31

ಈ ಕೆಳಗಿನ ವೆಬ್‌ ಸೈಟ್‌ನಲ್ಲಿ ಫ‌ಲಿತಾಂಶ ಲಭ್ಯ
http://www.pue.kar.nic.in
http://www.karresults.nic.in
http://www.puc.kar.nic.in
www.knowyourresult.com
www.indiaresults.com
www.examresults.net
www.karnatakaeducation.net
http://results.karnatakaeducation.net
www.bangaloreeducation.net
www.results.amarujala.com
www.BangaloreEducation.com
www.resultsat.com
www.resultout.com
www.optraservice.com
www.schools9.com
www.collegeforyou.com
www.goresults.net
www.digied.com
www.ace-online.co.in

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited