Untitled Document
Sign Up | Login    
Dynamic website and Portals
  
May 18, 2015

ಮಂಗೋಲಿಯಾಕ್ಕೆ 6300 ಕೋಟಿ ರೂ ಸಾಲ ಘೋಷಿಸಿದ ಪ್ರಧಾನಿ ಮೋದಿ

ಮಂಗೋಲಿಯಾಕ್ಕೆ 6300 ಕೋಟಿ ರೂ ಸಾಲ ಘೋಷಿಸಿದ ಪ್ರಧಾನಿ ಮೋದಿ

ಉಲಾನ್‌ ಬಟೋರ್‌ : ಮಂಗೋಲಿಯಾಕ್ಕೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿ ಎಂಬ ಗೌರವಕ್ಕೆ ಪಾತ್ರರಾಗಿರುವ ನರೇಂದ್ರ ಮೋದಿ, ಆ ದೇಶದ ಮೂಲಸೌಕರ್ಯ ಅಭಿವೃದ್ಧಿಗೆ ಬರೋಬ್ಬರಿ 1 ಶತಕೋಟಿ ಅಮೆರಿಕನ್‌ ಡಾಲರ್‌ (6300 ಕೋಟಿ ರೂ.) ಸಾಲ ಘೋಷಿಸಿದ್ದಾರೆ.

ಮೂರು ದಿನಗಳ ಚೀನಾ ಪ್ರವಾಸ ಮುಗಿಸಿ ಇಲ್ಲಿಗೆ ಆಗಮಿಸಿದ ಪ್ರಧಾನಿ ಮೋದಿ ಅವರು ಮಂಗೋಲಿಯಾ ಪ್ರಧಾನಿ ಚಿಮೆಡ್‌ ಸೈಖಾನ್‌ ಬಿಲೇಗ್‌ ಅವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ದ್ವಿಪಕ್ಷೀಯ ಆರ್ಥಿಕ ಪಾಲುದಾರಿಕೆಯನ್ನು ಹೊಸ ಎತ್ತರಕ್ಕೆ ಒಯ್ಯಲು ಈ ವೇಳೆ ಇಬ್ಬರೂ ನಾಯಕರು ಪ್ರತಿಜ್ಞೆ ಮಾಡಿದರು. ರಕ್ಷಣಾ ಸಹಕಾರದ ಜತೆಗೆ ನಾಗರಿಕ ಪರಮಾಣು ಸಹಕಾರ ಕ್ಷೇತ್ರದಲ್ಲಿ ಅವಕಾಶ ಶೋಧಿಸಲು ಸಹಮತ ವ್ಯಕ್ತಪಡಿಸಿದರು.

ಗಡಿ ಕಾವಲು, ಪೊಲೀಸ್‌, ಸರ್ವೇಕ್ಷಣೆ, ವಾಯು ಸೇವೆ, ಸೈಬರ್‌ ಭದ್ರತೆ ಹಾಗೂ ನವ-ನವೀನ ಇಂಧನ ಕ್ಷೇತ್ರಗಳು ಸೇರಿದಂತೆ ಒಟ್ಟು 13 ಒಪ್ಪಂದಗಳಿಗೆ ಉಭಯ ದೇಶಗಳು ಸಹಿ ಹಾಕಿದವು.

ಬಳಿಕ ಉಭಯ ನಾಯಕರು ಜಂಟಿ ಮಾಧ್ಯಮ ಸಂವಾದ ನಡೆಸಿದರು. ಈ ವೇಳೆ ಮೋದಿ ಅವರು, ಮಂಗೋಲಿಯಾದ ಮೂಲಸೌಕರ್ಯ ಅಭಿವೃದ್ಧಿಗೆ 1 ಬಿಲಿಯನ್‌ ಡಾಲರ್‌ ಸಾಲ ಘೋಷಿಸಿದರು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಕಾಯಂ ಸದಸ್ಯತ್ವ ಪಡೆಯುವ ಭಾರತದ ಯತ್ನಕ್ಕೆ ಮಂಗೋಲಿಯಾ ಬೆಂಬಲ ಘೋಷಿಸಿತು.

ಮೋದಿ ಮಂಗೋಲಿಯಾ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡಿದರು. ಕಲ್ಲಿದ್ದಲು, ತಾಮ್ರ, ಯುರೇನಿಯಂ ಸೇರಿದಂತೆ ಅಪಾರ ಖನಿಜ ಸಂಪನ್ಮೂಲವನ್ನು ಮಂಗೋಲಿಯಾ ಹೊಂದಿದೆ ಎಂದರು.

ಭಯೋತ್ಪಾದನೆ ವಿಚಾರದಲ್ಲಿ ದ್ವಿಮುಖ ನೀತಿ ತೋರುತ್ತಿರುವ ಅಂತಾರಾಷ್ಟ್ರೀಯ ಸಮುದಾಯದ ವಿರುದ್ಧ ಭಾರತ ಹಾಗೂ ಮಂಗೋಲಿಯಾ ಹರಿಹಾಯ್ದಿವೆ. ಭಯೋತ್ಪಾದಕರ ಎಲ್ಲ ಅಡಗುದಾಣಗಳನ್ನು ತಡ ಮಾಡದೇ ಕೂಡಲೇ ನಾಶಗೊಳಿಸಬೇಕು ಎಂದು ಭಾರತ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಂಗೋಲಿಯಾ ಪ್ರಧಾನಿ ಚಿಮೆಡ್‌ ಚೈಖಾನ್‌ಬಿಲೇಗ್‌ ಅವರು ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದೇ ವೇಳೆ, ಭಾರತದ "ಪೂರ್ವ ದಿಕ್ಕಿಗೆ ಒತ್ತು ಕೊಡು' ನೀತಿಯಲ್ಲಿ ಮಂಗೋಲಿಯಾ ಒಂದು ಭಾಗವಾಗಿದೆ ಎಂದು ಮೋದಿ ತಿಳಿಸಿದ್ದಾರೆ.

ಭಾರತೀಯ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ, ಕ್ಯಾನ್ಸರ್‌ ಚಿಕಿತ್ಸೆಗೆ ಬಳಸುವ ಸ್ವದೇಶಿ ಉಪಕರಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಂಗೋಲಿಯಾದ ಕ್ಯಾನ್ಸರ್‌ ಕೇಂದ್ರಕ್ಕೆ ಉಡುಗೊರೆ ನೀಡಿದರು. ಈ ಉಪಕರಣವನ್ನು ಭಾಭಾ ಅಣು ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದೆ.

ಚೀನಾದಿಂದ ಆಗಮಿಸಿದ ಮೋದಿ ಅವರಿಗೆ ಮಂಗೋಲಿಯಾ ರಾಜಧಾನಿ ಉಲಾನ್‌ ಬಟೋರ್‌ನಲ್ಲಿರುವ ಅರಮನೆಯಲ್ಲಿ ಭಾನುವಾರ ಬೆಳಗ್ಗೆ ಭವ್ಯ ಸ್ವಾಗತ ಕೋರಲಾಯಿತು.

19ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ಗಾಂದಾನ್‌ ಟೆಗ್‌ ಚಿನ್‌ಲೆನ್‌ ಬೌದ್ಧಮಂದಿರದಲ್ಲಿ ಮಹಾಬೋಧಿ ವೃಕ್ಷದ ಸಸಿಯನ್ನು ಮೊದಿ ಅವರು ನೆಟ್ಟರು.

ಅಟಲ್‌ ಬಿಹಾರಿ ವಾಜಪೇಯಿ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಶ್ರೇಷ್ಠತಾ ಕೇಂದ್ರ ವಿಸ್ತರಣೆ ಹಾಗೂ ಮೇಲ್ದರ್ಜೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು. ರಾಷ್ಟ್ರೀಯ ಕ್ಯಾನ್ಸರ್‌ ಸಂಸ್ಥೆಗೆ ತೆರಳಿ, ಕ್ಯಾನ್ಸರ್‌ ಚಿಕಿತ್ಸೆಗೆ ನೆರವಾಗುವ ಭಾಭಾಟ್ರಾನ್‌ ಉಪಕರಣ ಹಸ್ತಾಂತರಿಸಿದರು.

ಅಧ್ಯಕ್ಷ ಸಾಖೀಯಾಗಿನ್‌ ಎಲೆಗ್‌ ಡೊರ್ಜ್‌, ಪ್ರಧಾನಿ ಚಿಮೆಡ್‌ ಸೈಖನ್‌ ಬಿಲೇಗ್‌ ಅವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಈ ನಡುವೆ ಮೋದಿ ಅವರಿಗೆ ಮಂಗೋಲಿಯಾ ಸರ್ಕಾರ ಕುದುರೆ ಮತ್ತು ಪಿಟೀಲನ್ನು ಉಡುಗೊರೆಯಾಗಿ ನೀಡಿತು. ಸ್ಥಳೀಯ ಹಬ್ಬವೊಂದರಲ್ಲಿ ಮೋದಿ ಬಿಲ್ವಿದ್ಯೆ ಪ್ರದರ್ಶಿಸಿದ್ದಲ್ಲದೆ, ಸಾಂಪ್ರದಾಯಿಕ ಮಂಗೋಲಿಯನ್‌ ಉಡುಗೆಯಲ್ಲಿ ಮಿಂಚಿದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited