ಉಲಾನ್ ಬಟರ್ : ಚೀನಾ ಪ್ರವಾಸ ಯಶಸ್ವಿಯಾಗಿ ಮುಕ್ತಾಯಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾನುವಾರದಿಂದ ಮಂಗೋಲಿಯಾ ಪ್ರವಾಸ ಕೈಗೊಂಡಿದ್ದು ಅಲ್ಲಿನ ಅಭಿವೃದ್ಧಿಗೆ ಸಂಪೂರ್ಣ ನೆರವು ಘೋಷಿಸಿದ್ದಾರೆ.
ಮಂಗೋಲಿಯಾದ ರಾಜಧಾನಿ ಉಲಾನ್ ಬಟರ್ ನಲ್ಲಿರುವ ಪವಿತ್ರ ಧಾರ್ಮಿಕ ಕ್ಷೇತ್ರ ಗಂದಾನ್ ತೆಗ್ಚಿನ್ಲೆಂಗ್ ಬೌದ್ಧಧಾಮಕ್ಕೆ ಭೇಟಿ ನೀಡಿದ್ದಾರೆ. ಬಳಿಕ ಮಾತನಾಡಿರುವ ಪ್ರಧಾನಿ ಮೋದಿ, ಮಂಗೋಲಿಯಾದ ಅಭಿವೃದ್ಧಿಗೆ 1 ಬಿಲಿಯನ್ ಡಾಲರ್ ನೆರವು ಘೋಷಿಸಿದ್ದಾರೆ.
ಮಂಗೋಲಿಯಾ ಭಾರತದ ಆಧ್ಯಾತ್ಮಿಕ ನೆರೆ ರಾಷ್ಟ್ರವಾಗಿದೆ. ಇಲ್ಲಿಗೆ ಭೇಟಿ ನೀಡಿದ ಮೊದಲ ಭಾರತದ ಪ್ರಧಾನಿ ತಾವಾಗಿದ್ದು, ದೊರೆತ ಸ್ವಾಗತಕ್ಕೆ ತಾವು ಆಭಾರಿಯಾಗಿರುವುದಾಗಿ ತಿಳಿಸಿದ್ದಾರೆ.
ಮಂಗೋಲಿಯಾ ಭೇಟಿಯಿಂದ ಭಾರತ-ಮಂಗೋಲಿಯಾ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಂತರಿಕ ಭದ್ರತೆ, ವಿಮಾ ಸಾರ್ವಜನಿಕ ವಲಯಗಳಲ್ಲಿ ಉಭಯ ದೇಶಗಳ ನಡುವೆ ಮಹತ್ವದ ಒಪ್ಪಂದ ಸೇರಿದಂತೆ 29 ಒಪ್ಪಂದಗಳಿಗೆ ಮಂಗೋಲಿಯಾ ಪ್ರಧಾನಿ ಹಾಗೂ ಮೋದಿ ಸಹಿ ಹಾಕಿದ್ದಾರೆ. ಮಂಗೋಲಿಯಾ ಸಂಸತ್ ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣಮಾಡಲಿದ್ದಾರೆ.