ಇಸ್ಲಾಮಾಬಾದ್ : ಪಾಕಿಸ್ತಾನದ ಕರಾಚಿಯಲ್ಲಿ ಉಗ್ರರು ಅಟ್ಟಹಾಸ ಮೆರಿದ್ದಾರೆ. ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಗೆ 43 ಜನರು ಬಲಿಯಾಗಿದ್ದಾರೆ.
ಕರಾಚಿಯ ಸಫೂರಾ ಚೌಕ್ ಬಳಿ ಮೂರು ಬೈಕ್ ಗಳಲ್ಲಿ ಬಂದ 6 ಜನ ಉಗ್ರರು ಏಕಾ ಏಕಿ ಬಸ್ ನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪರಿಣಾಮ 16 ಮಹಿಳೆಯರು ಸೇರಿ ಒಟ್ಟು 47 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.
ಸುಮಾರು 20ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ನಲ್ಲಿ ಸುಮಾರು 60 ಜನರು ಪ್ರಯಾಣಿಸುತ್ತಿದ್ದು, ಭಯೋತ್ಪಾದಕರ ಗುಂಡಿನ ದಾಳಿಗೆ ಬಸ್ ಚಾಲಕ ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ.