Untitled Document
Sign Up | Login    
Dynamic website and Portals
  
May 8, 2015

ಮರು ಆಯ್ಕೆಗೊಂಡ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಗೆ ಮೋದಿ ಅಭಿನಂದನೆ

ಬ್ರಿಟನ್ ಪ್ರಧಾನಿಗೆ ಮೋದಿ ಟ್ವೀಟ್ ಬ್ರಿಟನ್ ಪ್ರಧಾನಿಗೆ ಮೋದಿ ಟ್ವೀಟ್

ನವದೆಹಲಿ : ಸತತ ಎರಡಾನೇ ಬಾರಿ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾಗಿರುವ ಡೇವಿಡ್ ಕ್ಯಾಮರೂನ್ ಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

ಬ್ರಿಟನ್ ಸಾರ್ವತ್ರಿಕ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ನೀವು ಈ ಹಿಂದೆಯೆ ಹೇಳಿದಂತೆ ಮತ್ತೊಮ್ಮೆ ಡೇವಿಡ್ ಕ್ಯಾಮರೂನ್ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ ('Phir Ek Baar, Cameron Sarkar') ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಬ್ರಿಟನ್ ಪ್ರಧಾನಿ ಚುನಾವಣೆಗೂ ಮುನ್ನ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಘೋಷಣೆಯ ಮಾದರಿಯನ್ನು ಅನುಸರಿಸಿದ್ದರು. 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಬ್ ಕಿ ಬಾರ್ ಮೋದಿ ಸರ್ಕಾರ್ ಎಂಬ ಘೋಷ ವಾಕ್ಯದಂತೆಯೇ ಬ್ರಿಟನ್ ನಲ್ಲಿ ಫಿರ್ ಏಕ್ ಬಾರ್ ಕ್ಯಾಮರೂನ್ ಸರ್ಕಾರ್ ಎಂಬ ಘೋಷವಾಕ್ಯವನ್ನು ಮುಂದಿಟ್ಟುಕೊಂಡು ಡೇವಿಡ್ ಕ್ಯಾಮರೂನ್ ಬಿರುಸಿನ ಪ್ರಚಾರ ನಡೆಸಿದ್ದರು. ಡೇವಿಡ್ ಕ್ಯಾಮರೂನ್ ನೇತೃತ್ವದ ಕನ್ಸರ್ವೆಟೀವ್ ಪಕ್ಷ 650 ಸ್ಥಾನಗಳಲ್ಲಿ 329 ಸ್ಥಾನಗಳಲ್ಲಿ ಜಯಗಳಿಸಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited