ಬೀಜಿಂಗ್ : ಪ್ರಧಾನಿ ನರೇಂದ್ರ ಮೋದಿ ಮುಂದಿನವಾರ ಚೀನಾ ಪ್ರವಾಸ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಚೀನಾದ ಸಾಮಾಜಿಕ ಜಾಲತಾಣ 'ಸಿನಾ ವೈಬೋ'ದಲ್ಲಿ ತಮ್ಮ ಖಾತೆ ತೆರೆದಿದ್ದಾರೆ.
ಈ ಮೂಲಕ 50 ಕೋಟಿ ಬಳಕೆದಾರರನ್ನು ಹೊಂದಿರುವ ಚೀನಾದ ಈ ಜನಪ್ರಿಯ ಜಾಲತಾಣದಲ್ಲಿ ಸದಸ್ಯತ್ವ ಪಡೆದ ಮೊದಲ ಭಾರತೀಯರಾಗಿದ್ದಾರೆ. "ಹಲೋ ಚೀನಾ! ಚೀನಾದ ಸ್ನೇಹಿತರೊಂದಿಗೆ ವೈಬೋ ಮೂಲಕ ಸಂವಾದಕ್ಕೆ ಎದುರು ನೋಡುತ್ತಿದ್ದೇನೆ' ಎಂದು ಮೋದಿ ತಮ್ಮ ಪೇಜ್ ನಲ್ಲಿ ಬರೆದಿದ್ದಾರೆ. ಮೊದಲ 1 ತಾಸಲ್ಲೇ 7,000 ಹಿಟ್ ಬಂದಿವೆ.
ಹಲವಾರು ಜನ ಮೋದಿಯವರು ವೈಬರ್ ಗೆ ಪದಾರ್ಪಣೆ ಮಾಡಿದ್ದನ್ನು ಸ್ವಾಗತಿಸಿದ್ದರೆ, ಒಬ್ಬ ಬಳಕೆದಾರ "ದಕ್ಷಿಣ ಟಿಬೆಟ್ ಚೀನಾಕ್ಕೆ ಸೇರಿದ್ದು, ಅರುಣಾಚಲ ಪ್ರದೇಶ ಟಿಬೆಟ್ ಭಾಗ. ಇದು ಬೀಜಿಂಗ್ ಆಡಳಿತಾತ್ಮಕ ನಿಯಮ' ಎಂದು ಬರೆದಿದ್ದಾನೆ.