ಶ್ರೀನಗರ : ಕಾಶ್ಮೀರದ ಆಡಳಿತವು ಇನ್ನು 6 ತಿಂಗಳ ಅವಧಿಯ ಕಾಲ ಶ್ರೀನಗರದಿಂದ ನಡೆಯಲ್ಪಡಲಿದೆ. ಚಳಿಗಾಲದ ರಾಜಧಾನಿ ಜಮ್ಮು ತನ್ನ 6 ತಿಂಗಳ ಅವಧಿ ಪೂರೈಸಿದ್ದು, ಮೇ 5ರಿಂದ ಕಾಶ್ಮೀರ ದರ್ಬಾರು ಶ್ರೀನಗರಕ್ಕೆ ಸ್ಥಳಾಂತರಗೊಳ್ಳಲಿದೆ.
ರಾಜಭವನ, ಸಚಿವಾಲಯ ಮತ್ತು ಇತರ ಕಚೇರಿಗಳು ಏಪ್ರಿಲ್ 24ರಂದು ಜಮ್ಮುವಿನಲ್ಲಿ ಕಾರ್ಯನಿರ್ವಹಣೆ ನಿಲ್ಲಿಸಿದ್ದು, ಮೇ 5ರಂದು ಶ್ರೀನಗರದಲ್ಲಿ ಪ್ರಾರಂಭವಾಗಲಿವೆ. ಇದಕ್ಕೆ ಇಂಗ್ಲಿಷ್ ನಲ್ಲಿ ’ದರ್ಬಾರ್ ಮೂವ್' ಎಂದು ಹೆಸರಿಸಲಾಗಿದೆ.
ಶ್ರೀನಗರದಲ್ಲಿ ನವೆಂಬರ್ ನಿಂದ ಏಪ್ರಿಲ್ ಅಂತ್ಯದ ವರೆಗೆ ವಿಪರೀತ ಚಳಿ ಮತ್ತು ಹಿಮಪಾತ ಸಂಭವಿಸುವ ಕಾರಣ, ಜಮ್ಮುವನ್ನು ಚಳಿಗಾಲದ ರಾಜಧಾನಿಯನ್ನಾಗಿ ಪರಿವರ್ತಿಸಲಾಗುತ್ತದೆ. ಇದು ಶತಮಾನದ ಪರಿಪಾಠವಾಗಿದೆ.