ನವದೆಹಲಿ : ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ತೈಲ ಕಂಪನಿಗಳು ದಿಢೀರನೇ ಏರಿಕೆ ಮಾಡುವ ಮೂಲಕ ವಾಹನ ಸವಾರರಿಗೆ ಶಾಕ್ ನೀಡಿವೆ.
ಕಚ್ಚಾತೈಲ ಬೆಲೆ ಹೆಚ್ಚಳ ಹಿನ್ನೆಲೆಯಲ್ಲಿ ಗುರುವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಪೆಟ್ರೋಲ್ ಬೆಲೆಯನ್ನು ಲೀಟರ್ ಗೆ 3.96 (ಸ್ಥಳೀಯ ತೆರಿಗೆ ಹೊರತುಪಡಿಸಿ) ರೂ. ಮತ್ತು ಡೀಸೆಲ್ ಬೆಲೆಯನ್ನು ಲೀ.ಗೆ 2.37 ರೂ.ನಷ್ಟು ಹೆಚ್ಚಿಸಲಾಗಿದೆ.
ವಿಶೇಷವೆಂದರೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಕುಸಿತ ಕಂಡಿದ್ದರಿಂದ ಈ ಹಿಂದೆ ಏಪ್ರಿಲ್ 2 ಮತ್ತು ಏಪ್ರಿಲ್ 16ರಂದು ಪೆಟ್ರೋಲ್ ಬೆಲೆಯಲ್ಲಿ ಕ್ರಮವಾಗಿ 80 ಪೈಸೆ ಮತ್ತು 1.30 ರೂಪಾಯಿ ಇಳಿಕೆ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಇನ್ನೂ ತೈಲ ಬೆಲೆ ಇಳಿಯಬಹುದು ಎಂದು ಕಾಯುತ್ತಿದ್ದ ವಾಹನ ಸವಾರರಿಗೆ ಈ ದರ ಏರಿಕೆ ಆಘಾತವನ್ನುಂಟು ಮಾಡಿದೆ.