Untitled Document
Sign Up | Login    
Dynamic website and Portals
  
April 16, 2015

ಗುಜರಾತ್‌ ನಲ್ಲಿ ದೇಶದ ಮೊದಲ ಸ್ಮಾರ್ಟ್‌ ಸಿಟಿ

ಅಹಮದಾಬಾದ್‌ : ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ 100 ಸ್ಮಾರ್ಟ್‌ ಸಿಟಿ ಯೋಜನೆಯನ್ವಯ ದೇಶದ ಮೊದಲ ಸ್ಮಾರ್ಟ್‌ ಸಿಟಿಯೊಂದು ಮೋದಿ ತವರು ರಾಜ್ಯ ಗುಜರಾತ್‌ ನಲ್ಲಿ ತಲೆಯೆತ್ತುತ್ತಿದೆ.

ಸಾಬರಮತಿ ನದಿ ದಂಡೆಯ ಗಾಂಧಿನಗರದ ಹೊರವಲಯದಲ್ಲಿ ಇದು ತಲೆಯೆತ್ತುತ್ತಿದ್ದು, ಮುಂದಿನ ಸ್ಮಾರ್ಟ್‌ ಸಿಟಿಗಳಿಗೆ ಮಾದರಿಯೆನ್ನಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ. ನರೇಂದ್ರ ಮೋದಿ ಮುಖ್ಯಮಂತ್ರಿ ಆಗಿದ್ದಾಗಲೇ ಯೋಜನೆ ಆರಂಭವಾಗಿತ್ತು.

ಸರ್ಕಾರದ ವತಿಯಿಂದ 860 ಎಕರೆಯಲ್ಲಿ ನಿರ್ಮಾಣವಾಗುತ್ತಿರುವ ಈ ಸ್ಮಾರ್ಟ್‌ ಸಿಟಿಗೆ ಗುಜರಾತ್‌ ಇಂಟರ್‌ ನ್ಯಾಷನಲ್‌ ಫೈನಾನ್ಸ್‌ ಟೆಕ್‌ ಸಿಟಿ (ಗಿಫ್ಟ್) ಎಂದು ಹೆಸರಿಡಲಾಗಿದೆ.

ಈವರೆಗೆ ಇಲ್ಲಿ 2 ಗಗನಚುಂಬಿ ಕಟ್ಟಡಗಳು ತಲೆಯೆತ್ತಿದ್ದು, ಭೂಮಿಯ ಅಡಿಯಲ್ಲಿ ಮೌಲಸೌಕರ್ಯ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಸ್ವಯಂಚಾಲಿತ ಕಸ ಸಂಗ್ರಹಣೆ, ನಲ್ಲಿಯಲ್ಲಿ ಶುದ್ಧ ಕುಡಿವ ನೀರು, ಈ ನಗರಕ್ಕೆಂದೇ ವಿಶೇಷ ವಿದ್ಯುತ್‌ ಉತ್ಪಾದನೆ, ಅಗಲವಾದ ರಸ್ತೆಗಳು, ಗಗನಚುಂಬಿ ಕಟ್ಟಡಗಳು, ಐಷಾರಾಮಿ ಐಭೋಗಗಳು- ಈ ನಗರದ ಹೈಲೈಟ್ಸ್‌.

ಮೊದಲ ಹಂತದಲ್ಲಿ ಈ ನಗರ ನಿರ್ಮಾಣಕ್ಕೆ 900 ಕೋಟಿ ರೂ. ಬಳಸಲಾಗಿದೆ. ಕಾಮಗಾರಿ ಇನ್ನೂ ಮುಂದುವರಿಯುತ್ತಿದೆ.

ಗಿಫ್ಟ್ ಸ್ಮಾರ್ಟ್‌ ಸಿಟಿಯ ಒಂದು ಬದಿ ನದಿ ಇದೆ. ಇನ್ನೊಂದು ಬದಿ ರಾಜಧಾನಿ ಗಾಂಧಿನಗರ, ವಾಣಿಜ್ಯ ನಗರಿ ಅಹಮದಾಬಾದ್‌ ಇವೆ. ಅಹಮದಾಬಾದ್‌ ನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ಇದೆ. ಇದು ಈ ಸ್ಮಾರ್ಟ್‌ ಸಿಟಿಗೆ ಅನುಕೂಲಕರ ವಾತಾವರಣ ನಿರ್ಮಿಸಿವೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : General

ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಯುದ್ಧ ನೌಕೆ ಐಎನ್‌ಎಸ್‌ ಕಿಲ್ತಾನ್‌ ಲೋಕಾರ್ಪಣೆ
  • ದೇಶಿ ನಿರ್ಮಿತ ಮೂರನೇ ಜಲಾಂತರ್ಗಾಮಿ ನೌಕೆ ಪ್ರಾಜೆಕ್ಟ್‌ 28ರ ಅಡಿಯಲ್ಲಿ ನಿರ್ಮಾಣಗೊಂಡ ಐಎನ್‌ಎಸ್‌ ಕಿಲ್ತಾನ್‌ ನೌಕೆಯನ್ನು ವಿಶಾಖಪಟ್ಟಣದ ನೌಕಾ ನೆಲೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಲೋಕಾರ್ಪಣೆ ಮಾಡಿದರು.
  • ಆರುಷಿ ಹತ್ಯೆ ಪ್ರಕರಣ: ತಲ್ವಾರ್ ದಂಪತಿಗಳು ಖುಲಾಸೆ;ಅಲಹಾಬಾದ್ ಹೈಕೋರ್ಟ್ ತೀರ್ಪು
  • ಅ.12ರ ಮಧ್ಯ ರಾತ್ರಿಯಿಂದ ಪೆಟ್ರೋಲ್ ಬಂಕ್ ಬಂದ್
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited