ಬಾಗ್ಧಾದ್ : ಐಸಿಸ್ ಉಗ್ರರ ವಿರೋಧಿಗಳಾಗಿ ಗುರುತಿಸಿಕೊಂಡಿರುವ ಜೈಶ್ ಅಲ್ ಇಸ್ಲಾಮ್ ಉಗ್ರರು ದಮಾಸ್ಕಸ್ನಲ್ಲಿ ಗಣರಾಜ್ಯೋತ್ಸವದ ಮಾದರಿಯಲ್ಲಿ ಮಿಲಿಟರಿ ಪರೇಡ್ ನಡೆಸಿದ್ದಾರೆ.
ಟ್ಯಾಂಕರ್ ಗಳೊಂದಿಗೆ 1,700 ಉಗ್ರರು ಸರತಿ ಸಾಲಿನಲ್ಲಿ ಕವಾಯತಿನಲ್ಲಿ ಪಾಲ್ಗೊಂಡಿರುವ ವಿಡಿಯೋ ಅನ್ನು ಸಂಘಟನೆ ಬಿಡುಗಡೆಗೊಳಿಸಿದೆ. ಮುಸುಕು ಧರಿಸಿದ್ದ ವಿಶೇಷ ಪಡೆ ಶಸ್ತ್ರಾಸ್ತ್ರಗಳನ್ನು ಹಿಡಿದು ಹತ್ತಿರದಿಂದ ಹೋರಾಡುವ ಕಲೆಯನ್ನು ಪ್ರದರ್ಶಿಸಿತು.
ಸಿರಿಯಾದಲ್ಲಿ 2011ರ ಕ್ರಾಂತಿಯ ಬಳಿಕ ನಡೆದ ಬೃಹತ್ ಮಿಲಿಟರಿ ಪರೇಡ್ ಇದಾಗಿದೆ. ಜೈಶ್ ಅಲ್ ಇಸ್ಲಾಮ್ ಸುಮಾರು 25,000 ಹೋರಾಟಗಾರರನ್ನು ಹೊಂದಿದೆ. ಸಿರಿಯಾ ಸರ್ಕಾರದ ವಿರುದ್ಧ ಹೋರಾಡಲು ಅದು ಅರಬ್ ರಾಷ್ಟ್ರಗಳಿಂದ ಹಣ ಮತ್ತು ಶಸ್ತ್ರಾಸ್ತ್ರ ಪಡೆದುಕೊಳ್ಳುತ್ತಿದೆ ಎನ್ನಲಾಗಿದೆ.