ಡಾಕಾ : ಕ್ರಿಕೆಟ್ ವಿಶ್ವಕಪ್ ಪ್ರಶಸ್ತಿ ಪ್ರದಾನ ಸಮಾರಂಭದಿಂದ ದೂರವಿಟ್ಟಿದ್ದಕ್ಕೆ ತೀವ್ರ ಆಕ್ರೋಶಗೊಂಡಿದ್ದ ಐಸಿಸಿ ಅಧ್ಯಕ್ಷ ಮುಸ್ತಫಾ ಕಮಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಭಾರತ-ಬಾಂಗ್ಲಾ ಕ್ವಾರ್ಟರ್ ಫೈನಲ್ ಪಂದ್ಯದದಲ್ಲಿ ಬಾಂಗ್ಲಾ ಸೋತ ನಂತರ ಪ್ರತಿಕ್ರಿಯಿಸಿದ್ದ ಮುಸ್ತಫಾ ಕಮಲ್ ಪಂದ್ಯದಲ್ಲಿ ಅಂಪೈರಿಂಗ್ ನಲ್ಲಿ ಗುಣಮಟ್ಟವಿರಲಿಲ್ಲ. ಪಂದ್ಯವನ್ನು ಪೂರ್ವನಿರ್ಧರಿಸಿದಂತೆ ಕಂಡುಬಂತು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಐಸಿಸಿ ಬಗ್ಗೆ ತೀವ್ರ ಅಸಮಧಾನ ಹೊರ ಹಾಕಿದ್ದರು.
ಇದರ ಪರಿಣಾಮ ಅಂತಿಮ ಪಂದ್ಯದ ಪ್ರಶಸ್ತಿ ಪ್ರದಾನ ಸಮಾರಂಭದಿಂದ ಅವರನ್ನು ದೂರವಿಟ್ಟು ಮುಖ್ಯಸ್ಥ ಹುದ್ದೆಯಲ್ಲಿರುವ ಶ್ರೀನಿವಾಸನ್ ರಿಂದ ಪ್ರಶಸ್ತಿ ವಿತರಿಸಲಾಗಿತ್ತು. ಇದಕ್ಕೆ ಮುಸ್ತಫಾ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ ಅವರಿಗೆ ಬಹುಮತ ಸಿಕ್ಕಿರಲಿಲ್ಲ. ಮುಸ್ತಫಾ ಕಮಲ್ ಬಾಂಗ್ಲಾದೇಶದ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಮತ್ತು ಸರ್ಕಾರದಲ್ಲಿ ಸಚಿವರೂ ಆಗಿದ್ದಾರೆ.