Untitled Document
Sign Up | Login    
Dynamic website and Portals
  
March 29, 2015

ಆಸ್ಟ್ರೇಲಿಯಾಗೆ 5ನೇ ಬಾರಿಗೆ ವಿಶ್ವಕಪ್ ಕಿರೀಟ

ಮೆಲ್ಬರ್ನ್ : ಮೆಲ್ಬರ್ನ್ ಕ್ರಿಕೆಟ್‌ ಮೈದಾನ ನೂತನ ಇತಿಹಾಸವೊಂದಕ್ಕೆ ಸಾಕ್ಷಿಯಾಯಿತು. ಆಸ್ಟ್ರೇಲಿಯಾ ತಂಡ ನ್ಯೂಝಿಲೆಂಡ್ ತಂಡವನ್ನು ಮಣಿಸಿ 2015ನೇ ಸಾಲಿನ ವಿಶ್ವಕಪ್ ಟ್ರೋಫಿಯನ್ನು ಎತ್ತಿಹಿಡಿದೆ.

ವಿಶ್ವ ಕ್ರಿಕೆಟ್‌ ರಂಗದಲ್ಲಿ ಕಳೆದ ಕೆಲವು ದಶಕಗಳಿಂದ ಬಲಾಡ್ಯ ತಂಡವಾಗಿ ರೂಪುಗೊಂಡಿರುವ ಹಾಗೂ ಸರ್ವಾಧಿಕ ನಾಲ್ಕು ಬಾರಿ ವಿಶ್ವಚಾಂಪಿಯನ್‌ ಆಗಿರುವ ಆಸ್ಟ್ರೇಲಿಯಾ ತಂಡವು ತನ್ನದೇ ನೆಲದಲ್ಲಿ ವಿಶ್ವಕಪ್‌ ಟ್ರೋಫಿಯನ್ನು ಎತ್ತಿ ಹಿಡಿಯುವ ಕ್ಷಣಕ್ಕೆ ಎಂ.ಸಿ.ಜಿ. ಸಾಕ್ಷಿಯಾಯಿತು.

ತನ್ನ ವಿಶ್ವಕಪ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಅಜೇಯವಾಗಿ ಫೈನಲ್‌ ಪ್ರವೇಶಿಸಿದ್ದ ನ್ಯೂಝಿಲ್ಯಾಂಡ್‌ ಆಟ ತಮ್ಮ ಬಿಗ್‌ ಬ್ರದರ್‌ ಗಳ ಎದುರು ನಡೆಯಲೇ ಇಲ್ಲ. ಟಾಸ್‌ ಗೆಲ್ಲುವ ಅದೃಷ್ಟ ಕಿವೀಸ್‌ ನಾಯಕನ ಪಾಲಾದರೂ ವಿಶ್ವಕಪ್‌ ಗೆಲ್ಲುವ ಅದೃಷ್ಟ ತನ್ನ ಏಕದಿನ ವೃತ್ತಿಬದುಕಿನ ವಿದಾಯ ಪಂದ್ಯವನ್ನು ಆಡುತ್ತಿರುವ ಮೈಕಲ್‌ ಕ್ಲಾರ್ಕ್‌ ಪಾಲಾಯಿತು.

ಈ ಮೂಲಕ ಬ್ರೆಂಡನ್‌ ಮೆಕ್‌ ಕಲಮ್‌ ಪಡೆ ಚೊಚ್ಚಲ ವಿಶ್ವಕಪ್‌ ಗೆದ್ದು ನೂತನ ಇತಿಹಾಸ ನಿರ್ಮಿಸಬಹದೆಂದು ಕನಸು ಕಂಡಿದ್ದ ವಿಶ್ವದ ಕ್ರಿಕೆಟ್‌ ಅಭಿಮಾನಿಗಳ ಆಸೆ ಕೈಗೂಡಲಿಲ್ಲ. ಆಸ್ಟ್ರೇಲಿಯಾ ತಂಡವು ಸರ್ವಾಧಿಕ 5ನೇ ಬಾರಿ ವಿಶ್ವ ಕ್ರಿಕೆಟ್‌ ಜಗತ್ತಿನ ಚಾಂಪಿಯನ್‌ ಆಗಿ ಮೆರೆದಾಡಿದ ಕೀರ್ತಿಗೆ ಪಾತ್ರವಾಯಿತು. ಈ ಹಿಂದೆ ಕಾಂಗಾರೂಗಳು 1987, 1999, 2003 ಹಾಗೂ 2007ರಲ್ಲಿ ವಿಶ್ವಚಾಂಪಿಯನ್‌ ಗಳಾಗಿದ್ದರು. ಆದರೆ ಹೊಸ ತಲೆಮಾರಿನ ಆಸೀಸ್‌ ಪಡೆ ವಿಶ್ವಚಾಂಪಿಯನ್‌ ಗಳಾಗುತ್ತಿರುವುದು ಈ ಬಾರಿಯ ವಿಶೇಷ.

ನ್ಯೂಜಿಲೆಂಡ್ ನೀಡಿದ 183 ರನ್ ಗಳ ಸಾಧಾರಣ ಮೊತ್ತವನ್ನು ನಿರಾಯಾಸವಾಗಿ ಚೇಸ್ ಮಾಡಿದ ಕ್ಲಾರ್ಕ್ ಬಳಗ 32 ಓವರ್ ಗಳಲ್ಲಿಯೇ 3 ವಿಕೆಟ್ ಗಳನ್ನು ಕಳೆದುಕೊಂಡು ಗುರಿ ಮುಟ್ಟಿತು. ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ (45 ರನ್) ಸ್ಮಿತ್ (49 ರನ್) ಮತ್ತು ಆಸೀಸ್ ನಾಯಕ ಮೈಕೆಲ್ ಕ್ಲಾರ್ಕ್ ಅವರ ಆಕರ್ಷಕ ಅರ್ಧ ಶತಕ (74 ರನ್)ದ ನೆರವಿನಿಂದ ಆಸ್ಟ್ರೇಲಿಯಾ ತಂಡ 183 ರನ್ ಗಳನ್ನು ಗಳಿಸಿ ಗುರಿ ಮುಟ್ಟಿತು. ಆ ಮೂಲಕ ಐದನೇ ಬಾರಿಗೆ ಆಸಿಸ್ ಪಡೆ ವಿಶ್ವಕಪ್ ಅನ್ನು ತನ್ನ ಪಾಲಾಗಿಸಿಕೊಂಡಿದೆ. ಇನ್ನು ನ್ಯೂಜಿಲೆಂಡ್ ಪರ ಹೆನ್ರಿ 2 ವಿಕೆಟ್ ಪಡೆದರೆ, ಬೌಲ್ಟ್ 1 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ಕೇವಲ 45 ಓವರ್ ಗಳಲ್ಲಿ 183 ರನ್ ಗಳಿಗೆ ಸರ್ವಪತನ ಕಂಡಿತು. ನ್ಯೂಜಿಲೆಂಡ್ ಪರ ಎಲಿಯಟ್ ಮತ್ತು ಟೇಲರ್ ಅವರನ್ನು ಹೊರತು ಪಡಿಸಿದರೆ ಯಾವೊಬ್ಬ ಆಟಗಾರನೂ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಲೇ ಇಲ್ಲ. ಇನ್ನು ನ್ಯೂಜಿಲೆಂಡ್ ತಂಡದಲ್ಲಿ ಬರೋಬ್ಬರಿ 4 ಮಂದಿ ಬ್ಯಾಟ್ಸ್ ಮನ್ ಗಳು ಶೂನ್ಯಕ್ಕೆ ಔಟಾಗಿದ್ದು, ನ್ಯೂಜಿಲೆಂಡ್ ಹಿನ್ನಗೆ ಕಾರಣವಾಯಿತು. ಈಡೀ ನ್ಯೂಜಿಲೆಂಡ್ ಇನ್ನಿಂಗ್ಸ್ ನಲ್ಲಿ ಎಲಿಯಟ್ ಮತ್ತು ಟೇಲರ್ ಅವರನ್ನು ಹೊರತು ಪಡಿಸಿ ನಾಯಕ ಮೆಕ್ಕಲಮ್ ಸೇರಿದಂತೆ ಉಳಿದ ಯಾವ ಆಟಗಾರ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಪ್ರಯತ್ನ ಮಾಡಲೇ ಇಲ್ಲ.

ನ್ಯೂಜಿಲೆಂಡ್ ಪರ ಆರಂಭಿಕರಾದ ಮಾರ್ಟಿನ್ ಗಪ್ಟಿಲ್ (15ರನ್), ಮೆಕ್ಕಲಮ್ (0) ಮತ್ತು ವಿಲಿಯಮ್ಸನ್ (12) ಬೇಗನೇ ಔಟಾದರು. ಆ ಬಳಿಕ ಬಂದ ಟೇಲರ್ (40 ರನ್) ಮತ್ತು ಇಲಿಯಟ್ (83 ರನ್) ಉತ್ತಮ ಜೊತೆಯಾಟ ಆಡುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಆರಂಭಿಕ ಆಘಾತದಿಂದ ಹೊರತಂದರು. ಆದರೆ ಪಂದ್ಯದ 36ನೇ ಓವರ್ ನಲ್ಲಿ ಉತ್ತಮವಾಗಿ ಆಡುತ್ತಿದ್ದ, ಟೇಲರ್ ಹಡ್ಡಿನ್ ವಿಕೆಟ್ ಒಪ್ಪಿಸಿ ಔಟಾದರು. ಆ ಬಳಿಕ ಬಂದ ಆ್ಯಂಡರ್ ಸನ್ ಮತ್ತು ರೋಂಚಿ ಶೂನ್ಯಕ್ಕೆ ಔಟಾದರು. ಬಳಿಕ ಕ್ರೀಸ್ ಗೆ ಆಗಮಿಸಿದ ವೆಟ್ಟೋರಿ, ಎಲಿಯಟ್ ಜೊತೆಗೂಡಿ ಇನ್ನಿಂಗ್ಸ್ ಕಟ್ಟಲು ಮುಂದಾಗಿದ್ದರು. ನಿಧಾನಗತಿಯಲ್ಲಿ ಬ್ಯಾಟ್ ಮಾಡಿದ ವೆಟ್ಟೋರಿ 23 ಎಸೆತಗಳಲ್ಲಿ ಕೇವಲ 7 ರನ್ ಗಳಿಸಿ ಜಾನ್ಸನ್ ಬೌಲಿಂಗ್ ನಲ್ಲಿ ಔಟಾದರು. ಆಗ ನ್ಯೂಜಿಲೆಂಡ್ ತಂಡದ ಮೊತ್ತ ಕೇವಲ 171 ರನ್ ಗಳಾಗಿತ್ತು.
ವೆಟ್ಟೋರಿ ಅವರ ಹಿಂದೆಯೇ 83 ರನ್ ಗಳಿಸಿ ಶತಕದ ಅಂಚಿನಲ್ಲಿದ್ದ ಎಲಿಯಟ್ ಕೂಡ ಇಲ್ಲದ ಹೊಡೆತಕ್ಕೆ ಮುಂದಾಗಿ ಫಾಲ್ಕ್ ನರ್ ಎಸೆತದಲ್ಲಿ ಹಡ್ಡಿನ್ ಗೆ ಕ್ಯಾಚ್ ನೀಡಿ ಹೊರನಡೆದರು. ಎಲಿಯಟ್ ಔಟ್ ಆಗುವುದರರೊಂದಿಗೆ ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ಕೂಡ ಬಹುತೇಕ ಅಂತ್ಯಗೊಂಡಿತ್ತು. ಏಕೆಂದರೆ ಎಲಿಯಟ್ ನಂತರ ಬಂದ ಬಾಲಂಗೋಚಿ ಆಟಗಾರರು ಒಬ್ಬರ ಹಿಂದೆ ಒಬ್ಬರು ಪೆವಿಲಿಯನ್ ಪರೇಡ್ ಮಾಡುವುದರೊಂದಿಗೆ 183 ರನ್ ಗಳಿಗೆ ಆಲ್ ಔಟ್ ಆಯಿತು.

ಆಸ್ಟ್ರೇಲಿಯಾ ಪರ ಸ್ಟಾರ್ಕ್ 2 ವಿಕೆಟ್, ಫಾಲ್ಕ್ ನರ್ 3 ವಿಕೆಟ್, ಮಿಚೆಲ್ ಜಾನ್ಸನ್ 3 ವಿಕೆಟ್ ಮತ್ತು ಮ್ಯಾಕ್ಸ್ ವೆಲ್ 1 ವಿಕೆಟ್ ಪಡೆದು ನ್ಯೂಜಿಲೆಂಡ್ ತಂಡದ ಪತನಕ್ಕೆ ಕಾರಣವಾದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 

More News From : Sports

ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ ಸಿಂಧು ಹೆಸರು ಶಿಫಾರಸು
  • ಪದ್ಮಭೂಷಣ ಪ್ರಶಸ್ತಿಗೆ ಪಿ.ವಿ ಸಿಂಧು ಹೆಸರು ಶಿಫಾರಸು
  • ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಹೆಸರನ್ನು ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಗೆ ಕೇಂದ್ರ ಕ್ರೀಡಾ ಸಚಿವಾಲಯ ಶಿಫಾರಸ್ಸು ಮಾಡಿದೆ.
  • ಮಕ್ಕಳಿಗೆ ಶಿಕ್ಷಣದ ಜೊತೆಗೆ ಕ್ರೀಡೆಗಳು ಅಗತ್ಯ : ರಾಮಲಿಂಗಾರೆಡ್ಡಿ
  • ರಿಯೋ ಒಲಂಪಿಕ್ಸ್ 2016 ಕ್ರೀಡಾ ಉತ್ಸವಕ್ಕೆ ಅದ್ದೂರಿ ತೆರೆ
  • The Ultimate Job Portal
    Netzume - Resume Website Gou Products

    Other News

    Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
    © bangalorewaves. All rights reserved. Developed And Managed by Rishi Systems P. Limited