Untitled Document
Sign Up | Login    
Dynamic website and Portals
  
March 30, 2015

ಬಿಜೆಪಿ ವಿಶ್ವದಲ್ಲೇ ಗರಿಷ್ಠ ಸದಸ್ಯತ್ವ ಹೊಂದಿರುವ ರಾಜಕೀಯ ಪಕ್ಷ

ನವದೆಹಲಿ : 'ಸದಸ್ಯತ್ವ ನೋಂದಣಿ' ಅಭಿಯಾನವನ್ನು ಯಶಸ್ವಿಗೊಳಿಸಿರುವ ಬಿಜೆಪಿ, ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯತ್ವ ಪಡೆದ ಪಕ್ಷ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ವರೆಗೂ 8.6ಕೋಟಿ ಸದಸ್ಯತ್ವ ಹೊಂದಿದ್ದ ಚೀನಾಕಮ್ಯುನಿಷ್ಟ್ ಪಕ್ಷ ವಿಶ್ವದಲ್ಲೇ ಗರಿಷ್ಠ ಸದಸ್ಯತ್ವ ಹೊಂದಿತ್ತು. ಇದೀಗ 8.8 ಕೋಟಿ ಸದಸ್ಯತ್ವ ಪಡೆಯುವ ಮೂಲಕ ಗರಿಷ್ಠ ಸದಸ್ಯತ್ವ ಹೊಂದಿದ ವಿಶ್ವದ ಏಕೈಕ ಪಕ್ಷವಾಗಿದೆ.

ಈ ವರೆಗೂ ನಡೆದಿರುವ ಸದಸ್ಯತ್ವ ಅಭಿಯಾನದಲ್ಲಿ ಬಿಜೆಪಿಗೆ 8.8 ಕೋಟಿ ಜನರು ನೋಂದಣಿ ಮಾಡಿದ್ದಾರೆ. 2014ರ ನವೆಂಬರ್ 1ರಂದು ಪ್ರಧಾನಿ ನರೇಂದ್ರ ಮೋದಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಪ್ರಥಮ ಸದಸ್ಯರಾಗಿ ನೋಂದಣಿ ಮಾಡಿಕೊಂಡಿದ್ದರು.

ಆನ್ ಲೈನ್ ಮೂಲಕವೂ ಬಿಜೆಪಿ ಸದಸ್ಯರಾಗಿ ನೋಂದಣಿ ಮಾಡಿಕೊಳ್ಳಲು ಬಿಜೆಪಿ ಅವಕಾಶ ನೀಡಿತ್ತು. ಅಲ್ಲದೇ, ಮೊಬೈಲ್ ನಂಬರ್ ಗೆ ಮಿಸ್ಡ್ ಕಾಲ್ ನೀಡುವ ಮುಖಾಂತರವೂ ದೇಶದ ಜನತೆ ಬಿಜೆಪಿ ಸದಸ್ಯರಾಗಲು ಅವಕಾಶ ನೀಡಿತ್ತು.

ಮಾ.31ರ ವೇಳೆಗೆ ಬಿಜೆಪಿ ತನ್ನ ಸದಸ್ಯರ ಸಂಖ್ಯೆಯನ್ನು 10 ಕೋಟಿಗೆ ಏರಿಕೆ ಮಾಡುವ ಗುರಿ ಹೊಂದಿದೆ. ಕಳೆದ 8 ದಿನಗಳಲ್ಲೇ 1 ಕೋಟಿ ಸದಸ್ಯರು ನೋಂದಣಿ ಮಾಡಿಕೊಂಡಿರುವುದು ವಿಶೇಷವಾಗಿದೆ.

2017ರಲ್ಲಿ ವಿಧಾನಸಭಾ ಚುನಾವಣೆ ಎದುರಿಸಲಿರುವ ಉತ್ತರ ಪ್ರದೇಶದಿಂದಲೇ ಅತಿ ಹೆಚ್ಚು ಸದಸ್ಯರು ನೋಂದಣಿ ಮಾಡಿಕೊಂಡಿದ್ದು, ಇದು ಬಿಜೆಪಿ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಬಿಜೆಪಿ ಅಭಿಪ್ರಾಯಪಟ್ಟಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited