Untitled Document
Sign Up | Login    
Dynamic website and Portals
  
August 31, 2015

ಆನ್ ಲೈನ್ ನಲ್ಲಿ ಹೊಸ ಗ್ಯಾಸ್ ಸಂಪರ್ಕ ನೋಂದಣಿ

2 ಕೆ ಜಿ ಸಿಲಿಂಡರ್ ಮಾರಾಟ ಆರಂಭಿಸಲು ನಿರ್ಧಾರ

ಆನ್ ಲೈನ್ ನಲ್ಲಿ ಹೊಸ ಗ್ಯಾಸ್ ಸಂಪರ್ಕ ನೋಂದಣಿ

ನವದೆಹಲಿ : ಹೊಸ ಅಡುಗೆ ಅನಿಲ ಸಂಪರ್ಕಕ್ಕೆ ಇನ್ನು ಮುಂದೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿದರೆ 3-4 ದಿನಗಳಲ್ಲಿ ಹೊಸ ಗ್ಯಾಸ್ ಸಂಪರ್ಕ ಪಡೆಯಬಹುದು.

ಈ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌, ಗ್ರಾಹಕರು ಈಗ ಆನ್ ಲೈನ್ ನಲ್ಲಿ ಹೊಸ ಸಂಪರ್ಕಕ್ಕೆ ಅರ್ಜಿ ಸಲ್ಲಿಸಬಹುದು. ಇದನ್ನು 48 ಗಂಟೆಗಳಲ್ಲಿ ಪರಿಶೀಲನೆ ನಡೆಸಿ, ಹತ್ತಿರದ ಅಡುಗೆ ಅನಿಲ ವಿತರಕ ಸಂಸ್ಥೆ ಹೊಸ ಸಂಪರ್ಕವನ್ನು 3-4 ದಿನಗಳಲ್ಲಿ ಮನೆ ಬಾಗಿಲಿಗೆ ತಂದು ನೀಡಲಿದೆ ಎಂದು ತಿಳಿಸಿದರು.

ಈ ವ್ಯವಸ್ಥೆಯಿಂದ ಗ್ರಾಹಕರು ಅನಿಲ ವಿತರಕರ ಹತ್ತಿರ ಅಲೆದಾಡುವ ಸಮಸ್ಯೆ ತಪ್ಪುತ್ತದೆ ಎಂದು ಹೇಳಿದರು. ಈವರೆಗೆ 25 ಲಕ್ಷ ಮಂದಿ ಸ್ವಯಂಪ್ರೇರಿತರಾಗಿ ಗ್ಯಾಸ್‌ ಸಬ್ಸಿಡಿ ತೊರೆದಿದ್ದಾರೆ ಎಂದು ಮಾಹಿತಿ ನೀಡಿದರು.

2013 ಅಕ್ಟೋಬರ್​ನಲ್ಲಿ 5 ಕೆಜಿ ಎಲ್​ಪಿಜಿ ಸಿಲಿಂಡರ್​ಗಳನ್ನು ಪರಿಚಯಿಸಿದ ಕೇಂದ್ರ ಸರ್ಕಾರ ಇದೀಗ 2 ಕೆಜಿಯ ಸಿಲಿಂಡರ್​ಗಳ ಮಾರಾಟವನ್ನು ಆರಂಭಿಸಲು ನಿರ್ಧರಿಸಿದೆ. ಸಾಮಾನ್ಯವಾಗಿ ಎಲ್​ಪಿಜಿ ಸಿಲಿಂಡರ್​ಗಳು 14.2 ಕೆಜಿ ತೂಕ ಹೊಂದಿರುತ್ತವೆ. ಆದರೆ ಇವುಗಳ ವರ್ಗಾವಣೆ ಮತ್ತು ಬೆಲೆ ಬಡ ಕುಟುಂಬಗಳಿಗೆ ಹೊರೆಯಾಗುತ್ತಿರುವ ಕಾರಣದಿಂದ ಸರ್ಕಾರ 155 ರೂ.ಗಳ 5 ಕೆಜಿ ಸಿಲಿಂಡರ್​ಗಳನ್ನು ಮಾರುಕಟ್ಟೆಗೆ ಬಿಟ್ಟಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ 2 ಕೆಜಿ ಸಿಲಿಂಡರ್​ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited