ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮುಂಬರುವ ಜರ್ಮನಿ, ಫ್ರಾನ್ಸ್ ಮತ್ತು ಕೆನಡ ಭೇಟಿಯ ಕುರಿತಾಗಿ ಟ್ವೀಟ್ ಮಾಡಿದ್ದಾರೆ.
ಫ್ರಾನ್ಸ್ ನೊಂದಿಗೆ ಆರಂಭವಾಗುವ ತಮ್ಮ ತ್ರಿರಾಷ್ಟ್ರ ಭೇಟಿಯು ಭಾರತದ ಆರ್ಥಿಕ ವಿಷಯ ಸೂಚಿಯನ್ನು ಉದ್ದೇಶಿಸಿದೆ ಎಂದು ಮೋದಿ ಹೇಳಿದ್ದಾರೆ.
ಫ್ರಾನ್ಸ್ನಲ್ಲಿ ಮೋದಿ, ಪ್ಯಾರಿಸ್ ಹೊರಗಡೆ ಕೆಲವು ಹೈಟೆಕ್ ಕೈಗಾರಿಕಾ ಘಟಕಗಳನ್ನು ಸಂದರ್ಶಿಸಲಿದ್ದಾರೆ.
ಪ್ರಧಾನಿ ಮೋದಿ ಮತ್ತು ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರೊಂದಿಗೆ ಜರ್ಮನಿಯಲ್ಲಿನ ಹ್ಯಾನೋವರ್ ಮೆಸೇ ಅನ್ನು ಉದ್ಘಾಟಿಸಲಿದ್ದಾರೆ. ಹ್ಯಾನೋವರ್ ಮೆಸೇ ವಿಶ್ವದ ಅತೀ ದೊಡ್ಡ ಕೈಗಾರಿಕೋದ್ಯಮ ಉತ್ಸವವೆಂದು ಪ್ರಸಿದ್ಧವಾಗಿದೆ.