ಶ್ರೀನಗರ : ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಸೇನಾ ಕ್ಯಾಂಪ್ ಮೇಲೆ 4-5 ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.
ಮಾ.20ರಂದು ಜಮ್ಮು-ಕಾಶ್ಮೀರದ ಕಾಥು ಜಿಲ್ಲೆಯ ಪೊಲೀಸ್ ಠಾಣೆ ಮೇಲೆ ಉಗ್ರರು ಬೆಳ್ಳಂಬೆಳಗ್ಗೆ ದಾಳಿ ನಡೆಸಿದ್ದು, ಮೂವರು ಪೊಲೀಸ್ ಸಿಬ್ಬಂದಿಗಳು, ಓರ್ವ ನಾಗರಿಕ ಸೇರಿ ನಾಲ್ಕು ಮಂದಿ ಸಾವನ್ನಪ್ಪಿದ್ದರು. ಈ ಸಂದರ್ಭದಲ್ಲಿ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಇಬ್ಬರು ಉಗ್ರರು ಬಲಿಯಾಗಿದ್ದರು.
ಉಗ್ರರ ಅಟ್ಟಹಾಸ ಇಂದೂ ಕೂಡ ಮುಂದುವರೆದಿದ್ದು, ಸಾಂಬಾ ಸೆಕ್ಟರ್ ನಲ್ಲಿರುವ ಬಿಎಸ್ ಎಫ್ ಸೇನಾ ಕ್ಯಾಂಪ್ ಗೆ ನುಗ್ಗಿದ ಎಕೆ-47, ಗ್ರೇನೆಡ್ ಹೊಂದಿದ್ದ ಶಸ್ತ್ರಸಜ್ಜಿತ 4-5 ಉಗ್ರರು ಭದ್ರಾತಾ ಪಡೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಬಿಎಸ್ ಎಫ್ ಯೋಧರು ನಡೆಸಿದ ಪ್ರತಿ ದಾಳಿಗೆ ಇಬ್ಬರು ಉಗ್ರರು ಸಾವನ್ನಪ್ಪಿದ್ದು, ಉಳಿದ ಉಗ್ರರಿಗಾಗಿ ಕಾರ್ಯಾಚರಣೆ ಮುಂದುವರೆದಿದೆ. ಸಾಂಬಾದ ಆರ್ಮಿ ಪಬ್ಲಿಕ್ ಶಾಲೆ ಬಳಿ ಭಯೋತ್ಪಾದಕರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ಆರಂಭವಾಗಿದೆ. ಈ ನಡುವೆ ಘಟನೆಯಲ್ಲಿ ಓರ್ವ ನಾಗರಿಕನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.