ಶ್ರೀನಗರ : ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಬಿಎಸ್ಎಫ್ ಯೋಧರೊಬ್ಬರ ಮನೆಗೆ ನುಗ್ಗಿದ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಬಿಎಸ್ ಎಫ್ ಯೋಧ ಸಾವನ್ನಪ್ಪಿದ್ದು, ಕುಟುಂಬದ ಮೂವರು ಗಂಭೀರವಾಗಿ ಗಾಯಗೊಂದಿದ್ದಾರೆ.
ಬಂಡಿಪೋರ ಜಿಲ್ಲೆಯ ಹಜಿನ್ ಟೌನ್ ನಲ್ಲಿರುವ ಯೋಧನ ಮನೆಗೆ ಕಳೆದ ರಾತ್ರಿ ಉಗ್ರರ ಗುಂಪು ದಾಳಿ ನಡೆಸಿದ್ದು, ಈ ವೇಳೆ ಯೋಧ ಸೇರಿ ಕುಟುಂಬಸ ಸದಸ್ಯರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಉಗ್ರರ ದಾಳಿಕೆ 33 ವರ್ಷದ ಬಿಎಸ್ಎಫ್ ಯೋಧ ರಮೀಜ್ ಪರ್ರಯ್ ಹುತಾತ್ಮರಾಗಿದ್ದು, ಗಾಯಗೊಂಡಿರುವ ಕುಟುಂಬ ಸದಸ್ಯರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಯೋಧ ರಮೀಜ್ ಅವರು ಕೆಲ ದಿನಗಳ ಹಿಂದಷ್ಟೇ ರಜೆ ನಿಮಿತ್ತ ಮನೆಗೆ ಬಂದಿದ್ದರು. ರಮೀಜ್ ಮನೆಗೆ ಬಂದಿರುವ ವಿಚಾರ ತಿಳಿದ ಉಗ್ರರು ಕಳೆದ ರಾತ್ರಿ ಮನೆಗೆ ನುಗ್ಗಿದ್ದಾರೆ. ಈ ವೇಳೆ ಕುಟುಂಬಸ್ಥರು ಮುಖಾಮುಖಿಯಾದಾಗ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ರಮೀಜ್ ಅವರನ್ನು ಅಪಹರಣ ಮಾಡಲು ಉಗ್ರರು ಯತ್ನ ನಡೆಸಿದ್ದಾರೆ. ಈ ವೇಳೆ ಉಗ್ರರ ವಿರುದ್ದ ರಮೀಜ್ ತಿರುಗಿ ಬಿದ್ದಿದ್ದರಿಂದ ಮನೆಯ ಹೊರಗೆ ಎಳೆದು ತಂದು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.