Untitled Document
Sign Up | Login    
Dynamic website and Portals
  
March 21, 2015

ದೆಹಲಿ: ಉಚಿತ ನೀರು ಮೀರಿ ಬಳಸುವವರಿಗೆ ಶೇ.10 ಶುಲ್ಕ ಹೇರಿಕೆ

ನವದೆಹಲಿ : ದೆಹಲಿಯ ಆಮ್‌ ಆದ್ಮಿ ಪಕ್ಷದ ಸರ್ಕಾರ ತಿಂಗಳಿಗೆ 20,000 ಲೀಟರ್ ಉಚಿತ ನೀರಿನ ಪ್ರಮಾಣವನ್ನು ಮೀರಿ ನೀರನ್ನು ಬಳಸುವ ಮನೆಗಳಿಗೆ ಶೇ.10ರಷ್ಟು ಶುಲ್ಕವನ್ನು ಏರಿಸಿದೆ.

ದೆಹಲಿಗರಿಗೆ ಚುನಾವಣಾ ಭರವಸೆಯ ಪ್ರಕಾರ ಉಚಿತ ನೀರಿನ ಯೋಜನೆಯನ್ನು ಪ್ರಕಟಿಸಿದ ಒಂದು ತಿಂಗಳ ಒಳಗಾಗಿ ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಅವರು ದೆಹಲಿ ಜಲ ಮಂಡಳಿಯ ಸಭೆಯ ಅಧ್ಯಕ್ಷತೆಯನ್ನು ವಹಿಸಿ ನೀರಿನ ಶುಲ್ಕವನ್ನು ಶೇ.10ರಷ್ಟು ಏರಿಸುವ ಪ್ರಸ್ತಾವಕ್ಕೆ ಸಮ್ಮತಿ ನೀಡಿದರು. ಆದರೆ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷ, ಆಪ್‌ ಸರ್ಕಾರದ ಈ ಕ್ರಮವನ್ನು ಜನರ ವಿಶ್ವಾಸಕ್ಕೆ ಬಗೆದ ದ್ರೋಹವೆಂದು ಟೀಕಿಸಿವೆ.

ಆದರೆ ಆಪ್‌ ಸರ್ಕಾರವು ತಿಂಗಳಿಗೆ 20,000 ಲೀಟರ್ ಉಚಿತ ನೀರನ್ನು ಮೀರಿ ಬಳಸುವವರಿಗೆ ಮಾತ್ರವೇ ಶೇ.10ರ ಶುಲ್ಕ ಅನ್ವಯವಾಗುತ್ತದೆ ಎಂದು ಹೇಳಿದೆ. 20,000 ಲೀಟರ್ ವರೆಗಿನ ನೀರನ್ನು ಜನರಿಗೆ ಉಚಿತವಾಗಿಯೇ ಪೂರೈಸಲ್ಪಡುತ್ತಿದ್ದು ಅದು ಹಾಗೆಯೇ ಮುಂದುವರಿಯಲಿದೆ ಎಂದು ಹೇಳಿದೆ.

ಆಪ್‌ ಸರ್ಕಾರ ಹೆಚ್ಚಿಸಿರುವ ಶೇ.10ರ ನೀರಿನ ಶುಲ್ಕ ಏರಿಕೆಯು ಗುರುವಾರದಿಂದಲೇ ಜಾರಿಗೆ ಬಂದಿದೆ. ದೆಹಲಿ ಜಲ ಮಂಡಳಿಯ ಹಣಕಾಸು ಸ್ವಾಸ್ಥ್ಯವನ್ನು ಕಾಪಿಡುವ ಸಲುವಾಗಿ ಈ ಏರಿಕೆಯನ್ನು ಮಾಡಲಾಗಿದೆ ಎಂದು ಆಪ್‌ ಹೇಳಿಕೊಂಡಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited