ನವದೆಹಲಿ : 'ಕೇಂದ್ರ ಸರ್ಕಾರ'ದ ಭೂಸ್ವಾಧೀನ ಕಾಯ್ದೆಗೆ ಆಗತ್ಯವಿದ್ದಲ್ಲಿ ತಿದ್ದುಪಡಿ ತರಲಾಗುವುದು ಎಂದು ಸಂಸದ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿರುವ ಯಡಿಯೂರಪ್ಪ, ಅಭಿವೃದ್ಧಿ ಕೆಲಸಗಳಿಗೆ ಫಲವತ್ತಾದ ಭೂಮಿಗಿಂತಲೂ ಒಣಭೂಮಿಯನ್ನು ಪಡೆಯಬೇಕು, ಅಭಿವೃದ್ಧಿಯೂ ಸಾಧ್ಯವಾಗಬೇಕು ಅಂತೆಯೇ ರೈತರಿಗೂ ಅನ್ಯಾಯವಾಗಬಾರದು ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಭೂಮಿ ಸ್ವಾಧೀನಪಡಿಸಿಕೊಳ್ಳದೇ, ರೈಲ್ವೆ, ಹೆದ್ದಾರಿ, ಕೈಗಾರಿಕೆಗಳ ಅಭಿವೃದ್ಧಿ ಸಾಧ್ಯವಿಲ್ಲ, ಭೂಮಿ ನೀಡುವ ರೈತರಿಗೆ ಮಾರುಕಟ್ಟೆ ಬೆಲೆಗಿಂತಲೂ 4 ಪಟ್ಟು ಹೆಚ್ಚು ಪರಿಹಾರ ನೀಡಬೇಕು, ಈ ವಿಷಯಗಳ ಬಗ್ಗೆ ಸಂಸದೀಯ ಸಭೆಯಲ್ಲಿ ಚರ್ಚಿಸಿ ಸರ್ಕಾರ ಸೂಕ್ತ ನಿರ್ಧರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಸುಗ್ರೀವಾಜ್ನೆ ಮೂಲಕ ಜಾರಿಗೆ ತಂದಿರುವ ಭೂಸ್ವಾಧೀನ ಕಾಯ್ದೆಗೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.