Untitled Document
Sign Up | Login    
Dynamic website and Portals
  
March 2, 2015

ಪ್ರಿಯಾಂಕ ವಾಧ್ರಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನ ಇಲ್ಲ: ಕಾರ್ಯಾಲಯದ ಸ್ಪಷ್ಟನೆ

ಪ್ರಿಯಾಂಕ ವಾಧ್ರ ಪ್ರಿಯಾಂಕ ವಾಧ್ರ

ನವದೆಹಲಿ : 'ಪ್ರಿಯಾಂಕ ವಾಧ್ರ' ಅವರಿಗೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡುವ ಸಾಧ್ಯತೆ ಬಗ್ಗೆ ಪ್ರಿಯಾಂಕ ಕಚೇರಿ ಸ್ಪಷ್ಟನೆ ನೀಡಿದ್ದು ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡುವ ಸಾಧ್ಯತೆಗಳನ್ನು ತಳ್ಳಿಹಾಕಿದೆ.

ಪ್ರಿಯಾಂಕಾ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡುವ ಪ್ರಸ್ತಾವನೆ ಪಕ್ಷದ ಮುಂದಿಲ್ಲ ಎಂದು ಕಾರ್ಯಾಲಯ ಸ್ಪಷ್ಟಪಡಿಸಿದೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಿರಂತರವಾಗಿ ಚುನಾವಣೆಗಳಲ್ಲಿ ಸೋಲುತ್ತಿರುವುದರಿಂದ ಪ್ರಿಯಾಂಕ ವಾಧ್ರ ಅವರನ್ನು ಪಕ್ಷಕ್ಕೆ ಕರೆತರಬೇಕೆಂಬ ಒತ್ತಾಯ ಕಳೆದ ಕೆಲವು ತಿಂಗಳಿನಿಂದ ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಪ್ರಿಯಾಂಕ ವಾಧ್ರ ಅವರಿಗೆ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಸ್ಥಾನ ನೀಡುವ ಬಗ್ಗೆ ವರದಿ ಪ್ರಕಟವಾಗಿತ್ತು.

ಪ್ರಿಯಾಂಕಾ ಅವರನ್ನು ಸಕ್ರಿಯ ರಾಜಕಾರಣಕ್ಕೆ ಕರೆತರಲು ಕಳೆದ ಮೂರು ತಿಂಗಳಿನಿಂದ ಉಪಾಧ್ಯಕ್ಷ ರಾಹುಲ್‌ ಗಾಂಧಿ ಪ್ರಯತ್ನಿಸಿದ್ದಾರೆ. ಅದಕ್ಕೆ ಈಗ ಹಿರಿಯ ನಾಯಕರ ಬೆಂಬಲವೂ ದೊರೆತಿದೆ ಎನ್ನಲಾಗಿತ್ತು. ಆದರೆ ಈ ಬಗ್ಗೆ ಪ್ರಿಯಾಂಕ ವಾಧ್ರ ಅವರ ಕಚೇರಿಯೇ ಸ್ಪಷ್ಟನೆ ನೀಡಿದ್ದು, ಅಂತಹ ಪ್ರಸ್ತಾವನೆ ಇಲ್ಲ ಎಂದು ತಿಳಿಸಿದೆ.

ಪ್ರಿಯಾಂಕಾಗೆ ಪಕ್ಷದಲ್ಲಿ ಅತ್ಯಂತ ಮಹತ್ವದ ಹುದ್ದೆ ನೀಡಬೇಕು ಎಂಬುದು ರಾಹುಲ್‌ ಬೇಡಿಕೆ. ಹೀಗಾಗಿ ಅವರಿಗೆ ಪ್ರಧಾನ ಕಾರ್ಯದರ್ಶಿ ಹುದ್ದೆ ಲಭಿಸಬಹುದೆಂದು ಟಿವಿ ಚಾನೆಲೊಂದು ವರದಿ ಮಾಡಿತ್ತು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited