Untitled Document
Sign Up | Login    
Dynamic website and Portals
  
March 2, 2015

ಆಪ್ ನ ಆಂತರಿಕ ಭಿನ್ನಮತದ ಬಗೆಗಿನ ವರದಿಗಳು ಹಾಸ್ಯಾಸ್ಪದ: ಯೋಗೇಂದ್ರ ಯಾದವ್

ನವದೆಹಲಿ : 'ಆಮ್ ಆದ್ಮಿ ಪಕ್ಷ'ದಲ್ಲಿ ಭಿನ್ನಮತ ಇರುವ ವರದಿಗಳನ್ನು ಪಕ್ಷದ ಮುಖಂಡ ಯೋಗೇಂದ್ರ ಯಾದವ್ ತಳ್ಳಿಹಾಕಿದ್ದಾರೆ.

ಆಪ್ ನಲ್ಲಿ ಆಂತರಿಕ ಭಿನ್ನಮತ ಇರುವುದರ ಬಗೆಗಿನ ಪತ್ರಿಕಾ ವರದಿಗಳು ಹಾಸ್ಯಾಸ್ಪದ ಎಂದು ಯೋಗೇಂದ್ರ ಯಾದವ್ ಹೇಳಿದ್ದಾರೆ. ಕಳೆದ 2 ದಿನಗಳಿಂದ ಪತ್ರಿಕೆಗಳು ನನ್ನ ಹಾಗೂ ಪ್ರಶಾಂತ್ ಭೂಷಣ್ ವಿರುದ್ಧ ಪಿತೂರಿ ನಡೆಸುತ್ತಿವೆ. ಕೆಲವೊಮ್ಮೆ ಪತ್ರಿಕೆಗಳಲ್ಲಿ ಬರುವ ವರದಿಗಳನ್ನು ನೋಡಿ ನಗು ಬರುತ್ತದೆ, ಇನ್ನೂ ಕೆಲವೊಮ್ಮೆ ನೋವಾಗುತ್ತದೆ ಎಂದು ಯೋಗೇಂದ್ರ ಯಾದವ್ ತಿಳಿಸಿದ್ದಾರೆ.

ಆಮ್ ಆದ್ಮಿ ಪಕ್ಷದಲ್ಲಿ ಭಿನ್ನಾಭಿಪ್ರಾಯವಿದೆ ಎಂಬ ವರದಿಗಳ ಹಿಂದಿನ ಉದ್ದೇಶ ತುಂಬಾ ನೋವುಂಟುಮಾಡುತ್ತದೆ. ದೆಹಲಿಯ ಜನತೆ ನಮಗೆ ಪೂರ್ಣ ಬಹುಮತ ನೀಡಿದ್ದು, ಅವರ ಅಭಿವೃದ್ಧಿಗಾಗಿ ಕೆಲಸ ಮಾಡಬೇಕಿದೆ. ದೆಹಲಿ ಜನತೆಯ ನಿರೀಕ್ಷೆಗಳನ್ನು ಹುಸಿ ಮಾಡಬಾರದು ಎಂದು ಆಪ್ ನಾಯಕ ಟ್ವೀಟ್ ಮಾಡಿದ್ದಾರೆ.

ಆಮ್‌ ಆದ್ಮಿ ಪಕ್ಷದ ನಿರ್ಣಾಯಕ ರಾಜಕೀಯ ಸಮಿತಿಯಿಂದ ಯೋಗೇಂದ್ರ ಯಾದವ್‌ ಅವರನ್ನು ವಜಾಮಾಡಬೇಕು ಎಂಬ ಆಗ್ರಹ ಕೇಳಿಬಂದಿತ್ತು. ಈ ಬೆನ್ನಲ್ಲೇ ಪಕ್ಷದ ಆಂತರಿಕ ಲೋಕಪಾಲ ಅಡ್ಮಿರಲ್‌ ಎಲ್‌.ರಾಮದಾಸ್‌ ಅವರು ಆಪ್‌ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಪತ್ರ ಬರೆದಿದ್ದ ಹಿನ್ನೆಲೆಯಲ್ಲಿ ಯೋಗೇಂದ್ರ ಯಾದವ್ ಸ್ಪಷ್ಟನೆ ನೀಡಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited