Untitled Document
Sign Up | Login    
Dynamic website and Portals
  
February 22, 2015

ಬ್ಯಾಂಕ್ ಮುಷ್ಕರ ಕೈಬಿಡುವಂತೆ ಜೇಟ್ಲಿ ಮನವಿ

ಅರುಣ್ ಜೇಟ್ಲಿ ಅರುಣ್ ಜೇಟ್ಲಿ

ನವದೆಹಲಿ : ಬ್ಯಾಂಕ್ ನೌಕರರುಗಳ ಒಕ್ಕೂಟಗಳು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ಕೈಗೊಂಡಿರುವ ನಿರ್ಧಾರವನ್ನು ಕೈಬಿಡುವಂತೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮನವಿ ಮಾಡಿದ್ದಾರೆ.

ಸಾರ್ವಜನಿಕ ವಲಯದ ಬ್ಯಾಂಕ್ ನೌಕರರ ಒಕ್ಕೂಟಗಳು ಫೆ.25ರಿಂದ 28ರ ತನಕ ನಾಲ್ಕು ದಿನಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರ ನಡೆಸಲು ನಿರ್ಧರಿಸಿವೆ. ಈ ಹಿನ್ನಲೆಯಲ್ಲಿ ಮುಷ್ಕರವನ್ನು ಕೈಬಿಡುವಂತೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮನವಿ ಮಾಡಿದ್ದಾರೆ.

ದೇಶದ ಜನತೆಯ ದೈನಂದಿನ ಬ್ಯಾಂಕಿಂಗ್ ವ್ಯವಹಾರದ ಹಿತದೃಷ್ಟಿಯಿಂದ ಮುಷ್ಕರ ಸೂಕ್ತವಾದುದಲ್ಲ. ಈಗಾಗಲೇ ವೇತನ ಪರಿಷ್ಕರಣೆ ಸಂಬಂಧ ನೌಕರರ ಒಕ್ಕೂಟಗಳು, ಸಂಘಟನೆಗಳ ಜತೆಗೆ ಬ್ಯಾಂಕ್‌ ಗಳು ಮಾತುಕತೆ ನಡೆಸುತ್ತಿವೆ. ಬಿಕ್ಕಟ್ಟನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದು ಉತ್ತಮ ಎಂದು ಜೇಟ್ಲಿ ಹೇಳಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited