Untitled Document
Sign Up | Login    
Dynamic website and Portals
  
February 22, 2015

ಪರೀಕ್ಷಾ ಮಂಡಳಿ ಹಗರಣ: ಶಿವರಾಜ್ ಸಿಂಗ್ ಗೆ ಪ್ರಧಾನಿ ಬುಲಾವ್

ನವದೆಹಲಿ : ಮಧ್ಯಪ್ರದೇಶದ ಪರೀಕ್ಷಾ ಮಂಡಳಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪ್ರಧಾನಿ ಮೋದಿ ಬುಲಾವ್ ನೀಡಿದ್ದಾರೆ.

ಹಗರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಭೇಟಿಯಾಗುವಂತೆ ಪ್ರಧಾನಿ ಮೋದಿ, ಶಿವರಾಜ್ ಸಿಂಗ್ ರನ್ನು ಆಹ್ವಾನಿಸಿದ್ದು, ಇಂದು ಭೇಟಿಯಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲಿದ್ದಾರೆ.

ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನೂ ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ ನಾಯಕರಾದ ಕಮಲ್‌ನಾಥ್‌, ದಿಗ್ವಿಜಯ್‌ಸಿಂಗ್‌, ಜೋತಿರಾಧಿತ್ಯ ಸಿಂಧಿಯಾ ಮೊದಲಾದವರು ಸುದ್ದಿಗೋಷ್ಟಿ ನಡೆಸಿ ಮಧ್ಯಪ್ರದೇಶದ ವೃತ್ತಿಪರಪರೀಕ್ಷಾ ಮಂಡಳಿಯಲ್ಲಿ ಕೆಲ ವರ್ಷಗಳ ಹಿಂದೆ ನಡೆದಿತ್ತು ಎನ್ನಲಾದ ನೇಮಕಾತಿ ಹಗರಣದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ಸಿಂಗ್‌ ಚೌಹಾಣ್‌ ಕೂಡಾ ಭಾಗಿಯಾಗಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯವನ್ನು, ಪ್ರಕರಣದ ತನಿಖೆ ನಡೆಸಿದ್ದ ಎಸ್‌.ಟಿ.ಎಫ್ ಮಾಡಿದೆ ಎಂದು ಗಂಭೀರ ಆರೋಪ ಮಾಡಿದ್ದರು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited