Untitled Document
Sign Up | Login    
Dynamic website and Portals
  
May 12, 2015

ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟ: ಬಾಲಕಿಯರದೇ ಮೇಲುಗೈ

ಬೆಂಗಳೂರು : 2014-2015ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಪ್ರತಿವರ್ಷದಂತೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಉಡುಪಿ ಜಿಲ್ಲೆ 93.37 % ಫ‌ಲಿತಾಂಶದೊಂದಿಗೆ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದರೆ, ಚಿಕ್ಕೋಡಿ 2ನೇ ಹಾಗೂ ಉತ್ತರ ಕನ್ನಡ 3ನೇ ಸ್ಥಾನ ಪಡೆದಿದೆ. ಗದಗ ಜಿಲ್ಲೆಗೆ ಕೊನೇ ಸ್ಥಾನ ಲಭ್ಯವಾಗಿದೆ. 2014-15 ನೇ ಸಾಲಿನಲ್ಲಿ ಒಟ್ಟಾರೆ ಫಲಿತಾಂಶ ಶೇ.81.82.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲಿ ಒಟ್ಟು 8,56,366 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಈ ಪೈಕಿ 8,37,433 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಒಟ್ಟಾರೆ ನೋಂದಾಯಿತ ವಿದ್ಯಾರ್ಥಿಗಳಲ್ಲಿ 4.52 ಲಕ್ಷ ಬಾಲಕರು ಹಾಗೂ 4.03 ಬಾಲಕಿಯರಿದ್ದಾರೆ. ಅಲ್ಲದೆ, 16,337 ಖಾಸಗಿ ಮತ್ತು 32,607 ಪುನರಾವರ್ತಿತ ವಿದ್ಯಾರ್ಥಿಗಳೂ ಸೇರಿದ್ದಾರೆ.

ಅಧಿಕೃತವಾಗಿ ವಿದ್ಯಾರ್ಥಿಗಳಿಗೆ ಫ‌ಲಿತಾಂಶ ಬುಧವಾರ ಮಧ್ಯಾಹ್ನ 3.30ಕ್ಕೆ ಆಯಾ ಹೈಸ್ಕೂಲುಗಳಲ್ಲಿ ದೊರೆಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್‌ ಮೊಹ್ಸಿನ್‌ ತಿಳಿಸಿದ್ದಾರೆ.

ಫ‌ಲಿತಾಂಶ ಪಡೆಯಬಹುದಾದ ವೆಬ್‌ ಸೈಟ್‌ ಗಳ ವಿವರ ಇಲ್ಲಿದೆ

www.kseeb.kar.nic.in; www.indiaresults.com; www.ResultsOut.com www.vidyavision.com ಅಥವಾ KAR10 ಎಂದು ಟೈಪ್‌ ಮಾಡಿ, ಸ್ಪೇಸ್‌ ಕೊಟ್ಟು 567675 ಅಥವಾ KAR ಎಂದು ಟೈಪ್‌ ಮಾಡಿ, ಸ್ಪೇಸ್‌ ಕೊಟ್ಟು ನೋಂದಣಿ ಸಂಖ್ಯೆ ಟೈಪ್‌ ಮಾಡಿ 56263ಗೆ ಕಳುಹಿಸಬಹುದು.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited