Untitled Document
Sign Up | Login    
Dynamic website and Portals
  
February 18, 2015

ಪ್ರಧಾನಿ ನರೇಂದ್ರ ಮೋದಿ ಸೂಟ್‌ ಗೆ 1 ಕೋಟಿ ಬಿಡ್

ಪ್ರಧಾನಿ ನರೇಂದ್ರ ಮೋದಿ ಸೂಟ್‌ ಗೆ 1 ಕೋಟಿ ಬಿಡ್ ಪ್ರಧಾನಿ ನರೇಂದ್ರ ಮೋದಿ ಸೂಟ್‌ ಗೆ 1 ಕೋಟಿ ಬಿಡ್

ಸೂರತ್ : ಗಣರಾಜ್ಯೋತ್ಸವದಂದು ಪ್ರಧಾನಿ ನರೇಂದ್ರ ಮೋದಿ ಅವರು ಧರಿಸಿದ್ದ ಸೂಟ್‌ ಹರಾಜಿಗೆ ಹಾಕಲಾಗಿದ್ದು, ಬರೋಬ್ಬರಿ 1 ಕೋಟಿ ರೂಪಾಯಿಗೆ ಬಿಡ್ ಮಾಡಲಾಗಿದೆ.

ನರೇಂದ್ರ ದಾಮೋದರ ಮೋದಿ ಎಂದು ಚಿನ್ನದ ದಾರದಲ್ಲಿ ಬರೆದಿರುವುದೇ ಅದರ ವಿಶೇಷತೆಯಾಗಿದ್ದು, ಗಣರಾಜ್ಯೋತ್ಸವದಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭೇಟಿ ವೇಳೆ ಈ ಸೂಟ್ ಪ್ರಮುಖ ಆಕರ್ಷಣೆಯಾಗಿತ್ತು.

ಸೂರತ್‌ ನಲ್ಲಿ ಈ ಹರಾಜು ಪ್ರಕ್ರಿಯೆ ನಡೆದಿದ್ದು, ಸುರೇಶ್ ಅಗರವಾಲ್ ಎಂಬುವವರು ಮೋದಿ ಸೂಟ್‌ಗೆ 1 ಕೋಟಿ ರುಪಾಯಿ ಬಿಡ್ ಮಾಡಿದ್ದಾರೆ. ಇಲ್ಲಿ ಮೋದಿ ಸೂಟ್ ಸೇರಿದಂತೆ ಪ್ರಧಾನಿ ವಿದೇಶ ಪ್ರವಾಸ ಕೈಗೊಂಡಿದ್ದಾಗ ಮತ್ತು ವಿದೇಶಿ ಅತಿಥಿಗಳು ದೆಹಲಿಗೆ ಭೇಟಿ ನೀಡಿದ್ದ ವೇಳೆ ನೀಡಿದ ಉಡುಗೊರೆಗಳನ್ನು ಹರಾಜಿಗೆ ಹಾಕಲಾಗಿದೆ.

ಈ ಮುಂಚೆ ಬಿಡ್ ಮಾಡಿದ್ದ ಬಿಜೆಪಿ ನಾಯಕ ರಾಜುಭಾಯಿ ಅಗರವಾಲ್ ಅವರು 51 ಲಕ್ಷ ಕೂಗಿದ್ದರು. ಮೋದಿ ಸೂಟ್‌ಗೆ 11 ಲಕ್ಷದಿಂದ ಬಿಡ್ ಆರಂಭವಾಗಿದ್ದು, ಈಗ 1 ಕೋಟಿಗೆ ಬಂದು ನಿಂತಿದೆ. ಕೇಂದ್ರ ಸರ್ಕಾರ ಆಯೋಜಿಸಿರುವ ಈ ಹರಾಜು ಮೇಳ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ.

ಈ ಹರಾಜಿನಿಂದ ಬಂದ ಹಣವು ನಮಾಮಿ ಗಂಗಾ ಟ್ರಸ್ಟ್ ಗೆ ದೇಣಿಗೆ ರೂಪದಲ್ಲಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited