Untitled Document
Sign Up | Login    
Dynamic website and Portals
  
January 28, 2015

ಗಣರಾಜ್ಯೋತ್ಸವದ ಜಾಹಿರಾತಿನಲ್ಲಿ ಜಾತ್ಯಾತೀತ, ಸಮಾಜವಾದಿ ಪದಗಳಿಗೆ ಗೇಟ್ ಪಾಸ್!

ನವದೆಹಲಿ : 'ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ' ಜ.26ರಂದು ಗಣರಾಜ್ಯೋತ್ಸವ ದಿನದಂದು ನೀಡಲಾಗಿದ್ದ ಜಾಹಿರಾತಿನಲ್ಲಿ ಸಮಾಜವಾದಿ ಜಾತ್ಯತೀತ ಎಂಬ ಪದಗಳನ್ನು ಕೈಬಿಟ್ಟಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಗಣರಾಜ್ಯೋತ್ಸವದ ಜಾಹಿರಾತಿನಲ್ಲಿ ಸಂವಿಧಾನದ ಪೀಠಿಕೆಯುಳ್ಳ ಸಾಲುಗಳನ್ನು ಹಾಕಲಾಗಿತ್ತು, ಆದರೆ ಇವುಗಳಲ್ಲಿ ಜಾತ್ಯಾತೀತ ಹಾಗೂ ಸಮಾಜವಾದಿ ಎಂಬ ಪದಗಳನ್ನು ಸೇರಿಸದೇ ಇರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ವಾರ್ತಾ ಮತ್ತು ಪ್ರಸಾರ ಇಲಾಖೆ ಪ್ರಕಟಿಸಿದ್ದ ಜಾಹಿರಾತಿನಲ್ಲಿ 'ಭಾರತದ ಪ್ರಜೆಗಳಾದ ನಾವು, ಭಾರತವನ್ನು ಒಂದು ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಲು ಬದ್ಧರಾಗಿರುತ್ತೇವೆ' ಎಂದಷ್ಟೇ ಹಾಕಲಾಗಿತ್ತು. ಆದರೆ ಇದರಲ್ಲಿ ಸಮಾಜವಾದಿ, ಜಾತ್ಯಾತೀತ ಪದಗಳು ಕೈತಪ್ಪಿರುವುದಕ್ಕೆ ಅಸಮಾಧಾನ ವ್ಯಕ್ತವಾಗಿದೆ.

ಜಾತ್ಯಾತೀತ, ಸಮಾಜವಾದಿ ಎಂಬ ಪದಗಳನ್ನು ಜಾಹಿರಾತಿನಿಂದ ಕೈಬಿಟ್ಟಿರುವುದರ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ರಾಜ್ಯ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ಸರ್ಕಾರ ಹಾಕಿರುವುದೇ ಭಾರತದ ಸಂವಿಧಾನದ ಮೂಲ ಪೀಠಿಕೆ. ಸೆಕ್ಯುಲರ್ ಹಾಗೂ ಸಮಾಜವಾದಿ ಎಂಬುದನ್ನು 1976ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಸೇರಿಸಲಾಯಿತು ಎಂದು ಹೇಳಿದ್ದಾರೆ.

ಸಂವಿಧಾನದ ಮೂಲ ಪೀಠಿಕೆಯನ್ನೇ ಜಾಹಿರಾತಿನಲ್ಲಿ ಬಳಸುವುದು, ಸಂವಿಧಾನದ ನಿರ್ಮಾತೃಗಳಿಗೆ ಸಲ್ಲಿಸುವ ಗೌರವವಾಗಿದೆ ಆದ್ದರಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ರಾಥೋಡ್ ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited