Untitled Document
Sign Up | Login    
Dynamic website and Portals
  
January 18, 2015

ಅರವಿಂದ್ ಕೇಜ್ರಿವಾಲ್ ಜನರನ್ನು ದಾರಿತಪ್ಪಿಸುತ್ತಿದ್ದಾರೆ: ಅಜಯ್ ಮಾಕೆನ್

ನವದೆಹಲಿ : ಯಾವುದೇ ಸರ್ಕಾರಿ ಬಂಗಲೆಗಳಲ್ಲಿ ವಾಸಿಸುವುದಿಲ್ಲ, ಅಥವಾ ಕೆಂಪು ದೀಪದ ವಾಹನಗಳಲ್ಲಿ ಚಲಿಸುವುದಿಲ್ಲ ಎಂದಿದ್ದ ಅರವಿಂದ್ ಕೇಜ್ರಿವಾಲ್ ಅಧಿಕಾರಕ್ಕೆ ಬಂದ ನಂತರ ಹೇಳಿದಕ್ಕೆ ವಿರುದ್ಧವಾಗಿ ನಡೆದುಕೊಂಡರು ಎಂದು ಕಾಂಗ್ರೆಸ್ ಪಕ್ಷ ಆಮ್ ಆದ್ಮಿ ಪಕ್ಷದ ಅಧ್ಯಕ್ಷರ ವಿರುದ್ಧ ಹರಿಹಾಯ್ದಿದೆ.


ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿಸಲಾಗುತ್ತಿರುವ ಅಜಯ್ ಮಾಕೆನ್, ಅಧಿಕಾರಕ್ಕೆ ಬಂದರೆ ಸಾಮಾನ್ಯ ನಾಗರಿಕನ ತರಹ ಬದುಕುತ್ತೇನೆ ಎಂದು ವಚನ ನೀಡಿದ್ದ ಅರವಿಂದ್ ಕೇಜ್ರಿವಾಲ್ ಅಧಿಕಾರಕ್ಕೆ ಬಂದ ನಂತರ ಅದನ್ನು ಮರೆತೇಬಿಟ್ಟರು. ಸರ್ಕಾರಿ ಕಾರಿನ ವಿಷಯವಾಗಲಿ, ಕೆಂಪು ದೀಪವಿರುವ ಕಾರುಗಳಲ್ಲಿ ಚಲಿಸುವುದಾಗಲಿ ಅಥವಾ ತನ್ನ ಸರ್ಕಾರಿ ರಕ್ಷಣೆಯನ್ನು ತೆಗೆದುಕೊಳ್ಳುವ ವಿಷಯದಲ್ಲೂ ಕೇಜ್ರಿವಾಲ್ ತಮ್ಮ ವಚನ ಮುರಿದರು ಎಂದು ದೂರಿದ್ದಾರೆ.

ಮುಖ್ಯಮಂತ್ರಿ ಆದಮೇಲೆ ಕೇಜ್ರಿವಾಲ್ ಸರ್ಕಾರಿ ಬಂಗಲೆಯಲ್ಲಿ ವಾಸಿಸುತ್ತಿದ್ದರು ಎಂಬುದಕ್ಕೆ ಅಧಿಕೃತ ದಾಖಲೆಗಳನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಅಜಯ್ ಮಾಕೆನ, ಆಪ್ ಪಕ್ಷದ 49 ದಿನಗಳ ದುರಾಡಳಿತವನ್ನು ಜನರಿಗೆ ತಿಳಿಸಲು ಕಿರು ಪುಸ್ತಕವೊಂದನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

 

 

Share this page : 
 

Readers' Comments (0)
Select Language : 
Press F12 to toggle Indian language and English
Your Name : 
Characters Remaining: 5000
 
 
The Ultimate Job Portal
Netzume - Resume Website Gou Products

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited